ಚುನಾವಣಾ ಬಹಿರಂಗ ಪ್ರಚಾರಕ್ಕೆ ಇನ್ನು ಕೆಲವೇ ಕೆಲವು ಗಂಟೆಗಳು ಮಾತ್ರಾನೇ  ಬಾಕಿ ಉಳಿದಿದೆ. ಎಲ್ಲಾ ಪಕ್ಷಗಳಿಂದ ಕಣದಲ್ಲಿರುವ ಕಟ್ಟಾಳುಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಕೊನೆ ಕ್ಷಣದ ಜಿದ್ದಾಜಿದ್ದಿಯಲ್ಲಿ ತೊಡಗಿದ್ದಾರೆ. ಕನಕಪುರ ಖ್ಯಾತಿಯ ಬಂಡೆ ಬಿಜೆಪಿ ವಿರುದ್ಧ ಬೆಂಕಿ ಉಂಡೆ ಉಗುಳಿದ್ದಾರೆ.
									
			
			 
 			
 
 			
					
			        							
								
																	ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಮ್ಮಿಶ್ರ ಪಕ್ಷಗಳ ಅಭ್ಯರ್ಥಿ ಡಿ.ಕೆ. ಸುರೇಶ್  ಅಬ್ಬರದ ಪ್ರಚಾರ ಕೈಗೊಂಡು ರೋಡ್ ಶೋ ನಡೆಸಿದ್ರು.
									
										
								
																	ಡಿ.ಕೆ ಸುರೇಶ್  ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ರು. ಮಾತ್ರವ್ಲಲದೇ ಬೆಂಗಳೂರು ಹೊರವಲಯದ ಬನ್ನೇ ರುಘಟ್ಟ ಬೇಗಹಳ್ಳಿ, ಹರಪನ ಹಳ್ಳಿ, ಜಿಗಣಿ ಕೈಗಾರಿಕಾ ಪ್ರದೇಶ. ಹಾರಗದ್ದೆ, ಚಂದಾಪುರ, ಮಳೇನಲ್ಲಸಂದ್ರ, ಹೀಗೆ ಆನೇಕಲ್  ತಾಲೂಕಿನ 20ಕ್ಕೂ ಅಧಿಕ ಕಡೆ ರೋಡ್ ಶೋ ನಲ್ಲಿ ಪಾಲ್ಗೊಂಡು ಮತದಾರರಲ್ಲಿ  ಮತಯಾಚನೆ  ಮಾಡಿದ್ರು.
									
											
							                     
							
							
			        							
								
																	ದಾರಿಯುದ್ದಕ್ಕೂ ಕೆಲವೆಡೆ ನೆರೆದಿದ್ದ ಜನರಲ್ಲಿ ತನ್ನ  ಸಮಾಜಮುಖಿ ಕೆಲಸ ವಿವರಿಸಿದ ಅವರು, ಮತ್ತೊಮ್ಮೆ ತಮ್ಮ ಸೇವೆ ಮಾಡುವ ಭಾಗ್ಯನೀಡಿ ಅಂತಾ ಮತದಾರರಲ್ಲಿ ಮನವಿ ಮಾಡಿದ್ರು.
									
			                     
							
							
			        							
								
																	ಇನ್ನು ಇದೇ ಸಂದರ್ಭದಲ್ಲಿ    ಮಾತನಾಡಿದ ಅವರು ತಮ್ಮ ಗೆಲುವು  ನಿಶ್ಚಿತ. ಈ ಹಿಂದೆ ಸಂಸದನಾಗಿದ್ದಾಗ ನಾನೇನು ಎಂಬುದನ್ನ ಜನತೆಗೆ ತೋರಿಸಿಕೊಟ್ಟಿದ್ದೇನೆ ಅದೇ ತನ್ನ ಗೆಲುವಿಗೆ ರಹದಾರಿ ಅಂದ್ರು.