Publish Date: Tue, 16 Apr 2019 (15:35 IST)
Updated Date: Tue, 16 Apr 2019 (15:37 IST)
ಬೆಂಗಳೂರು ದಕ್ಷಿಣ ಮತಕ್ಷೇತ್ರದಲ್ಲಿ ಟಿಕೆಟ್ ಸಿಗದೇ ವಂಚಿತರಾದ ತೇಜಸ್ವಿನಿ ಅನಂತಕುಮಾರ್ ಈಗ ಸೈಬಲ್ ಕ್ರೈಂ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನೋಟಾಗೆ ಚಲಾವಣೆ ಮಾಡಿ ಎಂದು ಎಲ್ಲೆಡೆ ಸಂದೇಶ ರವಾನಿಸಿದ್ದಾರೆ. ನಾನು ಈ ಮಾತನ್ನು ಹೇಳಿಲ್ಲ. ಮತದಾರರಿಗೆ ಗೊಂದಲ ಮೂಡಿಸಲು ಕರ ಪತ್ರವನ್ನು ಹೊರಡಿಸಿದ್ದಾರೆ ಎಂದು ದೂರಿದ್ದಾರೆ.
ಬಿಜೆಪಿ ಪರ ನಾನೂ ಪ್ರಚಾರ ಮಾಡುತ್ತಿದ್ದೇನೆ. ಯಾರು ಅಪಪ್ರಚಾರ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಸೈಬರ್ ಕ್ರೈಂಗೆ ದೂರು ನೀಡಲಾಗಿದೆ. ತನಿಖೆ ಮಾಡಿ ಎಂದು ಒತ್ರಾಯ ಮಾಡಿದ್ದೇನೆ ಎಂದ್ರು.
ಬಿಜೆಪಿ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದೇನೆ ಅಂತ ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.