Select Your Language

Notifications

webdunia
webdunia
webdunia
webdunia

ತೇಜಸ್ವಿನಿ ಅನಂತಕುಮಾರ್ ನಿವಾಸಕ್ಕೆ ತೇಜಸ್ವಿಸೂರ್ಯ ಭೇಟಿ; ಬೆಂಬಲಿಗರ ಆಕ್ರೋಶ

ತೇಜಸ್ವಿನಿ ಅನಂತಕುಮಾರ್ ನಿವಾಸಕ್ಕೆ ತೇಜಸ್ವಿಸೂರ್ಯ ಭೇಟಿ; ಬೆಂಬಲಿಗರ ಆಕ್ರೋಶ
ಬೆಂಗಳೂರು , ಮಂಗಳವಾರ, 26 ಮಾರ್ಚ್ 2019 (16:21 IST)
ತೇಜಸ್ವಿನಿ ಅನಂತಕುಮಾರ್ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ತೇಜಸ್ವಿಸೂರ್ಯ ಹಾಗೂ ಶಾಸಕ ರವಿಸುಬ್ರಮಣ್ಯ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಮುಖಂಡರಲ್ಲಿನ ಗೊಂದಲ ಬಯಲಿಗೆ ಬಿದ್ದಿದೆ.

ತೇಜಸ್ವಿನಿ ಅನಂತಕುಮಾರ್ ಅವರನ್ನು ಸಮಾಧಾನ ಪಡಿಸುವ ಯತ್ನ ನಡೆಯಿತು. ಈ ವೇಳೆ ಮಾಧ್ಯಮದವರನ್ನು ಒಳಗೆ ಬಿಡದೆ ಬಿಜೆಪಿ ಕಾರ್ಯಕರ್ತರು ಹೊರಗೆ ತಳ್ಳಿದ ಘಟನೆಯೂ ನಡೆಯಿತು.

ಈ ಸಂದರ್ಭ ಮಾತನಾಡಿದ ತೇಜಸ್ವಿನಿ ಅನಂತಕುಮಾರ್, ಕಾರ್ಯಕರ್ತರು ತಮ್ಮ ನೋವು ಹೇಳಿಕೊಂಡಿದ್ದಾರೆ. ಆದರೆ ದೇಶ ಮೊದಲು ಎನ್ನುವುದು ನಮ್ಮ ಸಿದ್ಧಾಂತ. ಎಲ್ರೂ ಪ್ರಚಾರಕ್ಕೆ ಹೋಗೋಣ ಎಂದು ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ ತೇಜಸ್ವಿನಿ ಅನಂತಕುಮಾರ್.

ಈ ವೇಳೆ, ಸೀಟು ಬಿಟ್ಟುಕೊಡುವಂತೆ ತೇಜಸ್ವಿ ಸೂರ್ಯ ಮೇಲೆ ಅನಂತಕುಮಾರ್ ಅಭಿಮಾನಿಗಳು, ಕಾರ್ಯಕರ್ತರು ಒತ್ತಾಯ ಮಾಡಿದ್ರು. ಆಗ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದು, ತೇಜಸ್ವಿನಿ ಅನಂತಕುಮಾರ್ ನನಗೆ ತಾಯಿ ಸಮಾನ. ನನ್ನನ್ನು ಬೆಳೆಸಿದವರೇ ಅನಂತಕುಮಾರ್. ನನ್ನಂತಹ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಪಕ್ಷ ಮೊದಲು ಎಂಬುದನ್ನು ತೇಜಸ್ವಿನಿಯವರೇ ಒಪ್ಪಿಕೊಂಡು ನನ್ಮನ್ನು ಆಶೀರ್ವದಿಸಿದ್ದಾರೆ.

ನನಗೆ ಕೊನೆ ಘಳಿಗೆಯಲ್ಲಿ ಯಾಕೆ ಟಿಕೆಟ್ ಕೊಟ್ಟರು ಎಂಬುದನ್ನು ನೀವು ಪ್ರಧಾನಿ ಮೋದಿಗೆ ಕೇಳಬೇಕು. ಅಮಿತ್ ಷಾ ಗೆ ಕೇಳಬೇಕು. ಈಗ ಪಕ್ಷ ಒಂದು ತೀರ್ಮಾನ ಮಾಡಿದೆ ಅದನ್ನು ನಾವು ಎಲ್ಲರೂ ಒಪ್ಪಲೇಬೇಕು ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ವರ್ಷದಿಂದ ಕಾಟ ಕೊಡ್ತಿದೆ ಹೆಣ್ಣುಚಿರತೆ