ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಅನಂತ್ ಕುಮಾರ್ ಪತ್ನಿ ತೇಜಸ್ವನಿ ಅವರ ಕೈ ತಪ್ಪಿ ತೇಜಸ್ವಿ ಸೂರ್ಯ ಅವರ ಕೈ ಸೇರಲು ಪ್ರಧಾನಿ ಮೋದಿ ಅವರು ಕಾರಣವಾದಾರಾ? ಎಂಬ ಚರ್ಚೆ ಇದೀಗ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.
ಈ ಹಿಂದೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಬಿಜೆಪಿ ಯುವಾ ಮೋರ್ಚಾದ ಜತೆ ಮಾತನಾಡುತ್ತಿದ್ದಾಗ ತೇಜಸ್ವಿಸೂರ್ಯ ಅವರನ್ನು ಹೊಗಳಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ.
ಅಂದು ನಡೆದ ಸಂವಾದದಲ್ಲಿ ಮೋದಿ, ತೇಜಸ್ವಿ ಸೂರ್ಯ ಜೊತೆ ಮಾತನಾಡುತ್ತಿದ್ದಾಗ, “ಅಪ್ ತೋ ಸ್ವಯಂ ಸೂರ್ಯ ಹೇ ಔರ್ ತೇಜಸ್ವಿ ಬಿ ಹೇ” (“ನೀನು ಸೂರ್ಯ, ನಿನ್ನಲ್ಲಿ ತೇಜಸ್ಸು ಇದೆ”} ಎಂದು ಹೊಗಳಿದ್ದರು. ಇದೀಗ ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದ ತೇಜಸ್ವಿ ಸೂರ್ಯ ಅವರನ್ನು ಪ್ರಧಾನಿ ಮೋದಿ ಅವರೇ ಆಯ್ಕೆ ಮಾಡಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.