Select Your Language

Notifications

webdunia
webdunia
webdunia
webdunia

ವರ್ಷದಿಂದ ಕಾಟ ಕೊಡ್ತಿದೆ ಹೆಣ್ಣುಚಿರತೆ

ವರ್ಷದಿಂದ ಕಾಟ ಕೊಡ್ತಿದೆ ಹೆಣ್ಣುಚಿರತೆ
ಮೈಸೂರು , ಮಂಗಳವಾರ, 26 ಮಾರ್ಚ್ 2019 (16:07 IST)
ಬೋನಿಗೆ ಬಿದ್ದ ಚಿರತೆಯಿಂದಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಶಿಂಡೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಹೆಚ್.ಡಿ.ಕೋಟೆ ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಸಿದ್ದೇಗೌಡಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ನಿನ್ನೆಯಷ್ಟೇ ಬೋನು ಇರಿಸಿದ್ದರು ಅರಣ್ಯ ಇಲಾಖೆಯವರು. ನಾಯಿ ಹಿಡಿಯಲು ಬಂದು ಬೋನಿಗೆ ಬಿದ್ದಿದೆ ಚಿರತೆ.

ಸುಮಾರು 3 ವರ್ಷ ಪ್ರಾಯದ ಹೆಣ್ಣು ಚಿರತೆ ಸೆರೆಯಾಗಿದ್ದು, ಗ್ರಾಮದ ಸುತ್ತಮುತ್ತ ಇನ್ನು ಹಲವು ಚಿರತೆಗಳು ಇರೋ ಶಂಕೆ ವ್ಯಕ್ತವಾಗಿದೆ. ಚಿರತೆ ಹಾವಳಿಯಿಂದ ತಪ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಬೋನಿಗೆ ಬಿದ್ದ ಚಿರತೆ ನೋಡಲು ಮುಗಿಬಿದ್ದ ಗ್ರಾಮದ ಜನರು, ತಂಡೋಪತಂಡವಾಗಿ ಕಬ್ಬಿನ ಗದ್ದೆಗೆ ಭೇಟಿ ನೀಡುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೇಸರಿ ಪಡೆ ಶಕ್ತಿ ಪ್ರದರ್ಶನ