Select Your Language

Notifications

webdunia
webdunia
webdunia
webdunia

ಮಹಿಳಾ ಮತದಾರರ ಓಲೈಕೆಗೆ ತಂದಿದ್ದ ನೂರಾರು ಕುಕ್ಕರ್ ವಶ

ಮಹಿಳಾ ಮತದಾರರ ಓಲೈಕೆಗೆ ತಂದಿದ್ದ ನೂರಾರು ಕುಕ್ಕರ್ ವಶ
ಹಾಸನ , ಬುಧವಾರ, 20 ಮಾರ್ಚ್ 2019 (15:32 IST)
ಲೋಕಸಭಾ ಚುನಾವಣೆಗೆ ಮತದಅನ ಇನ್ನು ತಿಂಗಳು‌ ಬಾಕಿ ಇರುವಾಗಲೇ ಈಗಿನಿಂದಲೇ ಮತದಾರಿಗೆ ಆಮಿಷ ಒಡ್ಡುವ ಕೆಲಸಕ್ಕೆ ಕೆಲವು ಅಭ್ಯರ್ಥಿಗಳು ಮುಂದಾಗಿದ್ದಾರೆ.

ಚುನಾವಣಾ ಪ್ಲೈಂಯಿಂಗ್ ಸ್ಕ್ವಾಡ್ ಕಾರ್ಯಾಚರಣೆ ನಡೆಸಿದ್ದು, ದಾಖಲೆಗಳಿಲ್ಲದ 4.5 ಲಕ್ಷ ಮೌಲ್ಯದ 168 ಪ್ರೆಸ್ಟೀಜ್ ಕುಕ್ಕರ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಹಾಸನದ ಸಕಲೇಶಪುರ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಿಳಾ ಮತದಾರನ್ನು ಸೆಳೆಯಲು ಕುಕ್ಕರ್ ಸಂಗ್ರಣೆ ಮಾಡಲಾಗುತ್ತಿತ್ತು ಎಂಬ ಶಂಕೆ ಅಧಿಕಾರಿಗಳಲ್ಲಿ ಬಲವಾಗಿದೆ.

ಮೈಸೂರಿನ ನವ್ಕಾರ್ ಮಾರ್ಕೆಟಿಂಗ್ ಮೂಲಕ ಖರೀದಿಸಿದ ಕುಕ್ಕರ್ ಗಳು ಇವಾಗಿದ್ದು, ಸಕಲೇಶಪುರ ಹೆತ್ತೂರು ಹೋಬಳಿಯ ಹಳ್ಳಿಬೈಲುವಿನ ಏಕ ರೆಸಾರ್ಟ್ ಗೆ ರವಾನಿಸಲಾಗುತ್ತಿದ್ದಾಗ ವಶಕ್ಕೆ ಅಧಿಕಾರಿಗಳು ಪಡೆದುಕೊಂಡಿದ್ದಾರೆ.  ಅಧಿಕಾರಿಗಳಾದ ಆದಿತ್ಯಾ ಎಚ್.ಎ. ಹಾಗೂ ಯಸಳೂರು ಪೊಲೀಸ್ ಉಪನಿರೀಕ್ಷಕ ಹರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೀದಿನಾಯಿಗಳ ದಾಳಿಗೆ ಜೀವತೆತ್ತ ಕುದುರೆ