ಫಣಿಯಮ್ಮ ಸಿನಿಮಾ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಟಿ ಎಲ್.ವಿ. ಶಾರದಾ ರಾವ್ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಅನಾರೋಗ್ಯದಿಂದಾಗಿ ಶಂಕರ ಆಸ್ಪತ್ರೆಗೆ ದಾಖಲಾಗಿದ್ದ ಶಾರದಾ ರಾವ್ ಮುಂಜಾನೆ 7.30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಜಿ.ವಿ.ಅಯ್ಯರ್ ನಿರ್ದೇಶನದ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಶಾರದಾ ಅವರು, ವಂಶವೃಕ್ಷ, ಭೂತಯ್ಯನ ಮಗ ಅಯ್ಯು, ಆದಿ ಶಂಕರಾಚಾರ್ಯ ಹಾಗೂ 1983ರಲ್ಲಿ ತೆರೆಕಂಡ ಫಣಿಯಮ್ಮ ಸಿನಿಮಾಗಳಲ್ಲಿ ನಟಿಸಿದ್ದರು. ಬಿ.ವಿ ಕಾರಂತ್ ನಿರ್ದೇಶನದ ‘ವಂಶವೃಕ್ಷ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ಎಲ್.ವಿ.ಶಾರದ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಸಂತಾಪ ಸೂಚಿಸಿದೆ.