Publish Date: Fri, 22 Mar 2019 (09:53 IST)
Updated Date: Fri, 22 Mar 2019 (09:54 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಬದುಕಿನಲ್ಲಿ ಏನೇ ಶುಭ ಗಳಿಗೆಯಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಾರೆ. ಇಂದು ಅವರ ವಿವಾಹ ವಾರ್ಷಿಕೋತ್ಸವವಾಗಿದ್ದು, ಆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಮನೆಯವರ ವಿರೋಧ ಕಟ್ಟಿಕೊಂಡು ಜಗ್ಗೇಶ್, ಪರಿಮಳಾರನ್ನು ಪ್ರೀತಿಸಿ ಮದುವೆಯಾಗಿದ್ದರು. ಆಗ 2000 ರೂ. ಖರ್ಚಿನಲ್ಲಿ 35 ವರ್ಷದ ಹಿಂದೆ ಮದುವೆಯಾದ ನೆನಪುಗಳು ಇನ್ನೂ ಅಮರ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
‘1984 ಮಾರ್ಚ್ 22 ನಾನು ಪರಿಮಳ 2000 ರೂ. ಖರ್ಚಿನಲ್ಲಿ ಮದುವೆಯಾಗಿ ಇಂದಿಗೆ 35 ವರ್ಷ. ಅಂದು ಕಲ್ಲಿನ ಮೇಲೆ ಕೆತ್ತಿದ ಜಾಗದಲ್ಲಿ ನಾವಿಬ್ಬರೂ ಕೂತಾಗ ನಡೆದುಬಂದ ಕಷ್ಟಸುಖದ ಸ್ವಾಭಿಮಾನದ ದಾರಿ ನೆನೆದು ಕಣ್ಣು ಒದ್ದೆಯಾಯಿತು. ಅಮರ ಹಳೆ ನೆನಪು’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಮತ್ತೆ ರಾಯರ ಸನ್ನಿಧಿಗೆ ಕುಟುಂಬ ಸಮೇತ ತೆರಳಿದ್ದಾರೆ. ಅಲ್ಲದೆ, ಅದೇ ಜಾಗದಲ್ಲಿ ಪತ್ನಿ ಮಕ್ಕಳ ಸಮೇತ ಫೋಟೋ ತೆಗೆದು ಖುಷಿ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ