Select Your Language

Notifications

webdunia
webdunia
webdunia
webdunia

ಮುಸ್ಲಿಂ ಸಮುದಾಯದ ಮತದಾರರನ್ನು ಸೆಳೆಯಲು ಬಿಜೆಪಿ ರೂಪಿಸಿದ ತಂತ್ರವೇನು ಗೊತ್ತಾ?

ಮುಸ್ಲಿಂ ಸಮುದಾಯದ ಮತದಾರರನ್ನು ಸೆಳೆಯಲು ಬಿಜೆಪಿ ರೂಪಿಸಿದ ತಂತ್ರವೇನು ಗೊತ್ತಾ?
ಚಿಕ್ಕಬಳ್ಳಾಪುರ , ಭಾನುವಾರ, 7 ಏಪ್ರಿಲ್ 2019 (10:22 IST)
ಚಿಕ್ಕಬಳ್ಳಾಪುರ : ಮುಸ್ಲಿಂ ಸಮುದಾಯದ ಮತದಾರರನ್ನು ಸೆಳೆಯಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.


ಹೌದು. 2014ರ ಲೋಕಸಭಾ ಚುನಾವಣೆಯಲ್ಲಿ ಸಂಸದ ವೀರಪ್ಪ ಮೊಯ್ಲಿ ವಿರುದ್ಧ ಬಿ.ಎನ್.ಬಚ್ಚೇಗೌಡ ಅವರು ಕೇವಲ 9,520 ಮತಗಳಿಂದ ಸೋತಿದ್ದರು. ಹೀಗಾಗಿ ಈ ಬಾರಿ ಮುಸ್ಲಿಂ ಮತದಾರರ ವೋಟ್‍ ಗಳ ಮೇಲೆ ಗಮನ ಹರಿಸಲು ಅವರು ರಣತಂತ್ರ ರೂಪಿಸಿದ್ದಾರೆ.


ಕಾಶ್ಮೀರದಲ್ಲಿ ಮುಸ್ಲಿಂ ಸಮುದಾಯದ ಮತದಾರರನ್ನು ಸೆಳೆಯಲು ಬಿಜೆಪಿ ಕೇಸರಿ ಬಿಟ್ಟು, ಹಸಿರು ಬಣ್ಣದ ಮೊರೆ ಹೋಗಿದೆ.  ಹಾಗೇ ಮುಸ್ಲಿಂ ಮತದಾರರನ್ನು ಸೆಳೆಯಲು ಬಚ್ಚೇಗೌಡ ಅವರು ಉರ್ದು ಭಾಷೆಯಲ್ಲಿ ಕರಪತ್ರ ಹಂಚುತ್ತಿದ್ದಾರೆ. ಈ ಕರಪತ್ರದಲ್ಲಿ ಅಭ್ಯರ್ಥಿ ಬಚ್ಚೇಗೌಡ ಹಾಗೂ ಕಮಲದ ಚಿಹ್ನೆ ಹಾಕಲಾಗಿದೆ. ಇಂಗ್ಲಿಷ್ ಸಂಖ್ಯೆಯನ್ನು ಹೊರತುಪಡಿಸಿ ಎಲ್ಲ ಮಾಹಿತಿಯನ್ನು ಉರ್ದು ಭಾಷೆಯಲ್ಲಿಯೇ ನೀಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಧರ್ಮವನ್ನು ಪಾಲಿಸದವರು ಪಕ್ಷ ಬಿಟ್ಟು ಹೋಗಲಿ- ಸಿದ್ದರಾಮಯ್ಯ