Publish Date: Sat, 06 Apr 2019 (14:51 IST)
Updated Date: Sat, 06 Apr 2019 (14:53 IST)
ತುಮಕೂರು : ದೇವೇಗೌಡ್ರು ಮಕ್ಕಳಿಗೋಸ್ಕರ ಎಷ್ಟೋ ಜನರನ್ನು ಕೊಂದು ಹಾಕಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜು ಅವರು, ಮಕ್ಕಳಿಗೋಸ್ಕರ ದೇವೇಗೌಡ್ರು ಎಷ್ಟು ಜನರನ್ನು ಕೊಂದು ಹಾಕಿದ್ದಾರೆ. ಅವರ ಜಾತಿಯವರನ್ನು ಕೊಂದು ಹಾಕಿದ್ದಾರೆ. ಅವರಿಗೆ ಬೇರೆ ಜಾತಿಗೆ ಕೈ ಹಾಕುವುದಕ್ಕೆ ಆಗಲ್ಲ. ದೇವೇಗೌಡ್ರು ತಮ್ಮ ಮಕ್ಕಳಿಗೋಸ್ಕರ ಬೇರೆಯವರ ಕುತ್ತಿಗೆ ಕೊಯ್ತಾರೆ. ಅವರ ಜಿಲ್ಲೆಯಲ್ಲಿ ಎಷ್ಟು ಕೊಲೆಗಳು ಆಗಿದ್ದು, ಲೆಕ್ಕ ಹಾಕಿಕೊಂಡು ಬರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವೇಗೌಡರು ಒಂದು ರೀತಿಯಲ್ಲಿ ಹೆಗಲ ಮೇಲೆ ಕೈ ಇಟ್ಟರೆ ಏಳು ವರ್ಷ ಭವಿಷ್ಯ ಇರಲ್ಲ. ಬಹಳ ಕಷ್ಟ. ಹುಷಾರಾಗಿರಬೇಕು ಅಷ್ಟೇ ಎಂದು ಜಿ.ಎಸ್. ಬಸವರಾಜು, ದೇವೇಗೌಡರ ವಿರುದ್ಧ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.