Select Your Language

Notifications

webdunia
webdunia
webdunia
webdunia

ಬಿಜೆಪಿಯವರಿಗೆ ಚುನಾವಣೆಗೆ ಹಣ ಸಂಗ್ರಹ ಕೆಲಸವನ್ನು ಐಟಿ ಇಲಾಖೆ ಮಾಡುತ್ತಿದೆ- ಡಿ.ಕೆ. ಸುರೇಶ್ ಆರೋಪ

ಚೆನ್ನಪಟ್ಟಣ
ಚೆನ್ನಪಟ್ಟಣ , ಶನಿವಾರ, 6 ಏಪ್ರಿಲ್ 2019 (10:29 IST)
ಚೆನ್ನಪಟ್ಟಣ : ಬಿಜೆಪಿಯವರಿಗೆ ಚುನಾವಣೆಗೆ ಹಣ ಸಂಗ್ರಹ ಕೆಲಸವನ್ನು ಐಟಿ ಇಲಾಖೆ ಮಾಡುತ್ತಿದೆ ಎಂದು ಡಿ.ಕೆ. ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.


ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರನ್ನೇ ಗುರಿ ಮಾಡಿ ದಾಳಿ ನಡೆಸಿ ಎದುರಿಸುವ ತಂತ್ರ ನಡೆಸುತ್ತಿದೆ. ಇದರ ಜೊತೆಗೆ ರಾಜ್ಯದ ಚುನಾವಣೆಗೂ ಹಣ ಸರಬರಾಜು ಮಾಡುವ ಕೆಲಸವನ್ನು ಐಟಿ ಇಲಾಖೆ ಮಾಡುತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.


ಇನ್ನು ಚುನಾವಣೆಗೂ ಮೊದಲೇ ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿಹಾಕಬೇಕೆಂದು ಐಟಿ ಅಸ್ತ್ರವನ್ನು ಪ್ರಯೋಗಿಸಲಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇದೀಗ ಇತರ ಮುಖಂಡ ಮೇಲೆ ಇದೇ ಅಸ್ತ್ರವನ್ನು ಪ್ರಯೋಗಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಯನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿಯ ಕುರಿತು ವ್ಯಂಗ್ಯವಾಡಿದ ಶ್ರೀರಾಮುಲು