Publish Date: Fri, 05 Apr 2019 (16:31 IST)
Updated Date: Fri, 05 Apr 2019 (16:55 IST)
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ಅಜ್ಜಿಯ ವಿಡಿಯೋ.
ಕುಮಾರಸ್ವಾಮಿ ಮಗನಿಗೆ ನನ್ನ ಓಟು ಎಂದು ಮಾತನಾಡಿರುವ ಅಜ್ಜಿಯ 49 ಸೆಕೆಂಡ್‌ಗಳ ವಿಡಿಯೋ ವೈರಲ್ ಆಗಿದೆ.
ಶ್ರೀನಿವಾಸ್.ಜಿ.ವಿ. ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವೈರಲ್ ಮಾಡಿದ್ದಾರೆ.
ನನಗೆ ನೂರಾ ಆರು ವರ್ಷ. ನಿಖಿಲ್ ಗೆದ್ದೇ ಗೆಲ್ತಾನೆ. ಭತ್ತದ ಹೊರೆ ಗುರುತು ಎಂದು ಮಾತನಾಡಿರುವ ಅಜ್ಜಿ. ನನ್ನ ಮೊಮ್ಮಗ ಎತ್ತಕೊಂಡು ಹೋಗಿ ಓಟ್ ಹಾಕಿಸ್ತಾನೆ ಎನ್ನುತ್ತಿದ್ದಾರೆ.
ಅಜ್ಜಿಯ ವಿಡಿಯೋ ಬಗ್ಗೆ ಜೋರಾದ ಚರ್ಚೆ ಶುರುವಾಗಿದೆ. ಎಲೆಕ್ಷನ್‌ವರೆಗೂ ಆರೋಗ್ಯವಾಗಿ ನೋಡಿಕೊಳ್ಳಿ ಎಂದು ಕಮೆಂಟ್ ಮಾಡಿರುವ ಸುಮಲತಾ ಬೆಂಬಲಿಗರಿಗೆ, ಎಲೆಕ್ಷನ್ ಮುಗಿನ ನಂತರ ಇನ್ನೂ 20 ವರ್ಷ ಬದುಕಿರುತ್ತಾರೆ ಎಂದು ಕಮೆಂಟ್ ಮಾಡಿರುವ ಜೆಡಿಎಸ್ ಕಾರ್ಯಕರ್ತರು ಟಾಂಗ್ ನೀಡಿದ್ದಾರೆ.