Publish Date: Fri, 05 Apr 2019 (13:51 IST)
Updated Date: Fri, 05 Apr 2019 (13:52 IST)
ಬೆಂಗಳೂರು : ಬೆಂಗಳೂರಿಗೆ ಮೀಸಲಾಗಿಟ್ಟ ನೀರನ್ನು ಮಂಡ್ಯದ ಕಾಲುವೆಗೆ ಹರಿಸಲು ಸಿಎಂ ಕುಮಾರಸ್ವಾಮಿ ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ಸಿಎಂ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೌದು. ಸಿಎಂ ಕುಮಾರಸ್ವಾಮಿ ಕುಡಿಯೋದಕ್ಕೆಂದು ಬೆಂಗಳೂರಿಗೆ ಮೀಸಲಾಗಿಟ್ಟ ನೀರನ್ನು ಮಂಡ್ಯದ ಜನರ ಕೃಷಿ ಹಾಗೂ ಕುಡಿಯಲು ಕಾಲುವೆಗೆ ಹರಿಸಲು ಸೂಚನೆ ಕೊಟ್ಟಿದ್ದು, ಇದು ಮಗನ ಗೆಲುವಿಗಾಗಿ ಕುಮಾರಸ್ವಾಮಿ ಮಾಡಿರುವ ತಂತ್ರ ಎಂಬ ಆರೋಪ ಕೇಳಿಬಂದಿದೆ.
ಆದರೆ ಈ ಕುರಿತು ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್ ಅವರು ಮಾತ್ರ, ‘ಮೊದಲು ಈ ದೇಶದ ರೈತರು ಮುಖ್ಯ. ಅನ್ನ ಬೆಳೆಯೋ ರೈತರಿಗೆ ಮೊದಲ ಆದ್ಯತೆ ನೀಡಬೇಕು. ರೈತರಿಗೆ ನೀರು ನೀಡದಿದ್ದರೆ ನಮಗೆ ತಿನ್ನಲು ಆಹಾರ ಎಲ್ಲಿಂದ ಬರುತ್ತೆ? ರೈತರಿಲ್ಲ ಅಂದ್ರೆ ನಾವು ಬದುಕಲು ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.