Select Your Language

Notifications

webdunia
webdunia
webdunia
webdunia

ಯುವಕರಿಗೆ ಲೈಂಗಿಕ ಕ್ರಿಯೆ ಗಿಂತ ಈ ವಿಷಯದ ಬಗ್ಗೆ ಆಸಕ್ತಿ ಹೆಚ್ಚಂತೆ

ಯುವಕರಿಗೆ ಲೈಂಗಿಕ ಕ್ರಿಯೆ ಗಿಂತ ಈ ವಿಷಯದ ಬಗ್ಗೆ ಆಸಕ್ತಿ ಹೆಚ್ಚಂತೆ
ಬೆಂಗಳೂರು , ಶುಕ್ರವಾರ, 5 ಏಪ್ರಿಲ್ 2019 (13:10 IST)
ಬೆಂಗಳೂರು : ಪುರುಷರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೆಚ್ಚಿರುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇತ್ತೀಚಿಗೆ ನಡೆದ ಸಂಶೋಧನೆಯೊಂದರ ಪ್ರಕಾರ ಯುವಕರಿಗೆ ಲೈಂಗಿಕ ಕ್ರಿಯೆ ಗಿಂತ ಹೆಚ್ಚಾಗಿ ಬೇರೆ ವಿಷಯದ ಬಗ್ಗೆ ಆಸಕ್ತಿಇದೆ ಎಂಬ ವಿಚಾರ ತಿಳಿದುಬಂದಿದೆ.


ಹೌದು. ಸಂಶೋಧನೆ ಪ್ರಕಾರ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಹೆಚ್ಚಿನ ಸಮಯವನ್ನು ವಿಡಿಯೋ ಗೇಮ್ ಹಾಗೂ ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಮಹತ್ವ ನೀಡ್ತಿದ್ದಾರಂತೆ. ಇದರಿಂದ ಅವರು ಲೈಂಗಿಕ ಕ್ರಿಯೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲವಂತೆ.
ಚಿಕಾಗೋ ವಿಶ್ವವಿದ್ಯಾನಿಲಯದ ಜನರಲ್ ಸೋಷಿಯಲ್ ಸರ್ವೆ ಪ್ರಕಾರ, 20 ವರ್ಷ ವಯಸ್ಸಿನ ಶೇಕಡಾ 23 ರಷ್ಟು ಯುವಕರು ವಿಡಿಯೋ ಗೇಮ್ ಹಾಗೂ ಸಾಮಾಜಿಕ ಜಾಲತಾಣದ ಕಾರಣ ಕಳೆದ ಒಂದು ವರ್ಷದಿಂದ ಸಂಭೋಗ ಬೆಳೆಸಿಲ್ಲವಂತೆ. ಈ ಸಂಖ್ಯೆ ಕಳೆದ 10 ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈಗ ಡಬಲ್ ಆಗಿದೆಯಂತೆ. 2008 ರಲ್ಲಿ ಇಂಥ ಪುರುಷರ ಸಂಖ್ಯೆ ಶೇಕಡಾ 8 ರಷ್ಟಿತ್ತು. 2018ರಲ್ಲಿ ಇವ್ರ ಸಂಖ್ಯೆ ಶೇಕಡಾ 27ರಷ್ಟಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

‘ದೇಶ ಮೊದಲು, ಪಕ್ಷ ಬಳಿಕ, ನಾನು ಎಂಬುವುದು ಕೊನೆ’- ಕೊನೆಗೂ ಮೌನ ಮುರಿದ ಎಲ್‍.ಕೆ. ಅಡ್ವಾಣಿ