Select Your Language

Notifications

webdunia
webdunia
webdunia
Friday, 11 April 2025
webdunia

ಮೈತ್ರಿ ಧರ್ಮವನ್ನು ಪಾಲಿಸದವರು ಪಕ್ಷ ಬಿಟ್ಟು ಹೋಗಲಿ- ಸಿದ್ದರಾಮಯ್ಯ

ಬೆಂಗಳೂರು
ಬೆಂಗಳೂರು , ಭಾನುವಾರ, 7 ಏಪ್ರಿಲ್ 2019 (10:19 IST)
ಬೆಂಗಳೂರು : ಕಾಂಗ್ರೆಸ್ ಬಂಡಾಯ ಮುಖಂಡರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಎಚ್ಚರಿಕೆಯೊಂದನ್ನು  ನೀಡಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮವನ್ನು ಎಲ್ಲಾ ಕಾರ್ಯಕರ್ತರು ಪಾಲಿಸಿ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಯಾರಿಗೆ ಇಷ್ಟ ಇಲ್ಲವೇ ಅವರು ಪಕ್ಷ ಬಿಟ್ಟು ಹೋಗಲಿ ಎಂದು ಹೇಳಿದ್ದಾರೆ.

 

ಚಲುವರಾಯಸ್ವಾಮಿ ಏನು ಹೇಳಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಅವರನ್ನು ಕರೆದು ಮಾತನಾಡುತ್ತೇನೆ. ಅಲ್ಲದೇ ನಾಳೆ ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆಯನ್ನು ಕರೆದಿದ್ದೇನೆ. ಸಭೆಯಲ್ಲಿ ಸಣ್ಣಪುಟ್ಟ ಗೊಂದಲ, ಭಿನ್ನಾಭಿಪ್ರಾಯ ಬಗೆಹರಿಸುತ್ತೇವೆ. ಮೈಸೂರು, ಮಂಡ್ಯ, ತುಮಕೂರು, ಹಾಸನಗಳಲ್ಲಿ ಮೈತ್ರಿ ಅಭ್ಯರ್ಥಿ ಪರ ದೇವೇಗೌಡರೊಂದಿಗೆ ಜಂಟಿ ಪ್ರಚಾರ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಒಂದು ವೃಷಣದಿಂದ ಮಕ್ಕಳನ್ನು ಪಡೆಯಬಹುದೇ?