Publish Date: Fri, 05 Apr 2019 (17:43 IST)
Updated Date: Fri, 05 Apr 2019 (17:45 IST)
ಎಲ್ಲ ಅಲ್ಲೇ ನಿಲ್ಬೇಕು, ಯಾರು ಬರಬೇಡಿ ಹತ್ರ. ನಡಿರ್ಲಾ ಆಕಡೆಗೆ, ಯಾರೂ ಬರಬೇಡಿ ಹತ್ರ. ಹೀಗಂತ ಮಾಜಿ ಸಿಎಂ ಹೇಳಿದ ಪ್ರಸಂಗ ನಡೆದಿದೆ.
ಕೃಷ್ಣಭೈರೇಗೌಡ ಪರ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ರಾಮಯ್ಯ ಕಸಿವಿಸಿ ಅನುಭವಿಸಿದ್ರು.
ಸ್ಟೇಜ್ ಮೇಲೆ ಮುತ್ತಿಕೊಂಡ ಕಾರ್ಯಕರ್ತರು ಗದ್ದಲಕ್ಕೆ ಕಾರಣವಾದರು. ಸಿದ್ದರಾಮಯ್ಯನವರ ಭಾಷಣದ ವೇಳೆ ಸ್ಟೇಜ್ ಮೇಲೆ ನೂಕುನುಗ್ಗಲು ಉಂಟಾಯಿತು. ಆಗ ಕಿರಿಕಿರಿ ಅನುಭವಿಸಿದ ಸಿದ್ದರಾಮಯ್ಯಗೆ, ಜನರನ್ನು ಸರಿಸುವಂತೆ ಮಹಿಳಾ ಅಭಿಮಾನಿಗಳಿಂದ ಕೂಗು ಕೇಳಿಬಂದಿತು.
ಸುತ್ತ ಮುತ್ತಿಕೊಂಡಿದ್ದ ಕಾರ್ಯಕರ್ತರನ್ನು ತಾನೇ ದೂರ ಸರಿಸಿದ ಸಿದ್ದರಾಮಯ್ಯ, ನಡಿರ್ಲಾ ಆಕಡೆಗೆ, ಯಾರೂ ಬರಬೇಡಿ ಹತ್ರ ಅಂತ ಸರಿಸಿದ್ರು.