Publish Date: Fri, 05 Apr 2019 (17:36 IST)
Updated Date: Fri, 05 Apr 2019 (17:38 IST)
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕಚ್ಚಾಟ ಬಿಜೆಪಿಗೆ ಲಾಭವಾಗಲಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.
ಪ್ರೆಸ್ ಕ್ಲಬ್ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ,
ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ರಾಜ್ಯದಲ್ಲಿ ಕನಿಷ್ಟ 22 ಸ್ಥಾನ ಗೆಲ್ಲುವ ವಿಶ್ವಾಸ ಇದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಸುಳ್ಳಿನ ಕತೆಗಳನ್ನು ಹೇಳುತ್ತಿದ್ದಾರೆ. ಮೋದಿ ಏನೂ ಮಾಡಿಲ್ಲ ಎಂದು ರಾಹುಲ್‌ಗಾಂಧಿ ಹೇಳುತ್ತಿದ್ದಾರೆ. ದೇಶದ ನೈರ್ಮಲ್ಯ ಕಾಪಾಡಲು 8.8 ಕೋಟಿ ಶೌಚಾಲಯ ನಿರ್ಮಾಣ ಮಾಡಿದೆ ಎಂದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ ಹೆಚ್ಚಿದೆ. ಉಗ್ರಗಾಮಿಗಳ ಹುಟ್ಟಡಗಿಸುವುದಲ್ಲಿ ಮುಂದಾಗಿದ್ದಾರೆ. ಪಾಕಿಸ್ಥಾನಪರ ಯಾರೂ ಸಹಕಾರ ನೀಡುತ್ತಿಲ್ಲ ಎಂದರು. ರಾಜ್ಯದ ರೈತರ ಸಾಲಮನ್ನಾ ಆಗಿಲ್ಲ.
ಆಲಮಟ್ಟಿ ಆಣೆಕಟ್ಟಿನ ಎತ್ತರ 517 ಮೀಟರ್ ಗೆ ಏರಿಸಿದರೆ ರೈತರಿಗೆ ಅನುಕೂಲವಾಗಲಿತ್ತು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಈ ಬಗ್ಗೆ ಚಕಾರ ಎತ್ತಿಲ್ಲ. ನಂಬಿಕೆದ್ರೋಹ ವಿಶ್ವಾಸ ದ್ರೋಹ ನಡೀತಿದೆ ಎಂದು ಬಿ.ಎಸ್.ಯಡಿಯೂರಪ್ಪ ಟೀಕೆ ಮಾಡಿದ್ರು.