Select Your Language

Notifications

webdunia
webdunia
webdunia
webdunia

ಡೀನೋಟಿಫಿಕೇಷನ್, ಡೀಮಾನಿಟೈಸೇಷನ್ ಬಿಟ್ಟರೆ ಬಿಜೆಪಿ ಬಳಿ ಏನಿದೆ?

ಡೀನೋಟಿಫಿಕೇಷನ್, ಡೀಮಾನಿಟೈಸೇಷನ್ ಬಿಟ್ಟರೆ ಬಿಜೆಪಿ ಬಳಿ ಏನಿದೆ?
ಕೊಪ್ಪಳ , ಗುರುವಾರ, 4 ಏಪ್ರಿಲ್ 2019 (21:01 IST)
ಬಿಜೆಪಿಗೆ ಕೇವಲ ಡಿನೋಟಿಫಿಕೇಷನ್, ಡೀಮಾನಿಟೈಸೇಷನ್, ಸರ್ಜಿಕಲ್ ಸ್ಟೈಕ್‍ಗಳನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಪಕ್ಷ ದೇಶದಲ್ಲಿನ ಬಡವರ ಏಳ್ಗೆಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಆದರೆ, ಬಿಜೆಪಿಗೆ ಹೇಳಿಕೊಳ್ಳುವ ಯಾವುದೇ ಜನಪರ ಕಾರ್ಯಕ್ರಮಗಳಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್  ವ್ಯಂಗ್ಯವಾಡಿದ್ದಾರೆ.

ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್  ಪರವಾಗಿ ಮತ ಯಾಚಿಸಲು ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶದಲ್ಲಿ 20 ಅಂಶಗಳ ಕಾರ್ಯಕ್ರಮಗಳು, ಬಡವರನ್ನು ಬಡತನದಿಂದ ನಿರ್ಮೂಲನೆ ಮಾಡಿ ಅವರ ಏಳ್ಗೆ ಮಾಡುವುದು, ಭೂಸುಧಾರಣಾ ಕಾಯ್ದೆಗಳಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಜನಮನ್ನಣೆ ಗಳಿಸಿದೆ ಎಂದರು.

ಆದರೆ, ಬಿಜೆಪಿ ಪಕ್ಷಕ್ಕೆ ಹೇಳಿಕೊಳ್ಳುವಂತಹ ಯಾವುದೇ ಕಾರ್ಯಕ್ರಮಗಳಿಲ್ಲ. ದೇಶದ ಜನರ ಪರ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ಕೇವಲ ಡಿನೋಟಿಫಿಕೇಷನ್, ಡೀಮಾನಿಟೈಸೇಷನ್, ಸರ್ಜಿಕಲ್ ಸ್ಟೈಕ್‍ಗಳನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಯಶ್, ದರ್ಶನ್ ಅಭಿಮಾನಿಗಳದ್ದು ಮತಗಳಾಗಿ ಬರೋ ನಂಬಿಕೆ ಇಲ್ಲ ಎಂದ ಸುಮಲತಾ