Select Your Language

Notifications

webdunia
webdunia
webdunia
webdunia

ನಗುತ್ತಲೇ ಐದು ವರ್ಷ ಕಳೆದ ಸದಾನಂದಗೌಡ ಎಂದೋರಾರು?

ನಗುತ್ತಲೇ ಐದು ವರ್ಷ ಕಳೆದ ಸದಾನಂದಗೌಡ ಎಂದೋರಾರು?
ಬೆಂಗಳೂರು , ಗುರುವಾರ, 4 ಏಪ್ರಿಲ್ 2019 (20:30 IST)
ಈ ಬಾರಿಯ ಚುನಾವಣೆ ಕೇವಲ ಬಿಜೆಪಿ-ಕಾಂಗ್ರೆಸ್ ನಡುವಿನ ಚುನಾವಣಾ ಹೋರಾಟ ಅಲ್ಲ, ದೇಶದ, ಯುವ ಸಮುದಾಯದ ಭವಿಷ್ಯ ನಿರ್ಧರಿಸುವ ಚುನಾವಣೆ ಎಂದು ಡಿಸಿಎಂ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಈ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಭೈರೇಗೌಡ ಅವರ ಪರವಾಗಿ ಕಮ್ಮಗೊಂಡನಹಳ್ಳಿಯಲ್ಲಿ ರೋಡ್‌ ಶೋನಲ್ಲಿ ಮಾತನಾಡಿದ ಅವರು, ಸೈದ್ದಾಂತಿಕವಾಗಿ ಜೆಡಿಎಸ್ ಎರಡು ಪಕ್ಷಗಳು ಒಂದೇ ರೀತಿ ಇವೆ. ಅದರಂತೆಯೇ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ. ಮೊದಲಿಗೆ ಉತ್ತರ ಕ್ಷೇತ್ರವನ್ನು ಎಚ್.ಡಿ ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದೆವು. ಎಚ್.ಡಿ ದೇವೇಗೌಡರು ತುಮಕೂರು ಬಯಸಿದ್ದರಿಂದ ಇಲ್ಲಿಗೆ ಕೃಷ್ಣ ಭೈರೇಗೌಡರನ್ನು ಇಲ್ಲಿನ ಅಭ್ಯರ್ಥಿ ಮಾಡಿದೆವು. ಇಲ್ಲಿಂದ ಗೆದ್ದು ಹೋದ ಡಿ.ವಿ ಸದಾನಂದಗೌಡರು ಯಾವುದೇ ಕೆಲಸ ಮಾಡಲಿಲ್ಲ. ಬದಲಿಗೆ ಡಿವಿಎಸ್ ನಗುತ್ತಲೇ ಇಡೀ ಐದು ವರ್ಷ ಕಾಲ ಕಳೆದರು.

ಇದೀಗ ನಿಮ್ಮ ಕೆಲಸ ಮಾಡಿಕೊಡಬಲ್ಲ ದಕ್ಷ ಅಭ್ಯರ್ಥಿ ಕೊಟ್ಟಿದ್ದೇವೆ. ಶಾಸಕನಾಗಿ, ಸಂಸದನಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳಲ್ಲಿ ಬರೀ ಮಾತಿನ ಮೋಡಿ ಅಷ್ಟೇ ಪ್ರದರ್ಶಿಸಿದರು. ಪ್ರಪಂಚದಲ್ಲಿ ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ ಮಾತ್ರ ಎಂದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಕೈ ನಾಯಕರ ಗೊಡ್ಡು ಬೆದರಿಕೆಗೂ ಹೆದರಲ್ಲ ಎಂದೋರು ಯಾರು?