Publish Date: Thu, 04 Apr 2019 (17:05 IST)
Updated Date: Thu, 04 Apr 2019 (17:07 IST)
ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಾಯಕರ ವಿರುದ್ಧ ಭುಗಿಲೆದ್ದ ಆಕ್ರೋಶ ವ್ಯಾಪಕ ಸ್ವರೂಪ ಪಡೆದುಕೊಳ್ಳುತ್ತಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ವಿರುದ್ಧ ಘೋಷಣೆ ಕೂಗಲಾಗುತ್ತಿದೆ.
ಇಂಡುವಾಳು ಸಚ್ಚಿದಾನಂದ ಮನೆಯಲ್ಲಿ ನಡೆದ ಸಭೆ ಬಳಿಕ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಮ್ಮಗನನ್ನು ಬೆಳೆಸಲು ಮಂಡ್ಯವನ್ನ ಜೆಡಿಎಸ್ ಆಯ್ಕೆ ಮಾಡಿಕೊಂಡಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ಅಂಬಿ ಅಣ್ಣನ ಋಣ ತೀರಿಸಲು ನಾವೂ ಸುಮಲತಾ ಅವ್ರನ್ನ ಬೆಂಬಲಿಸುತ್ತೇವೆ. ನಮಗೆ ಕಾಂಗ್ರೆಸ್ ಬಾವುಟ ಹಿಡಿದು ಸುಮಲತಾ ಪರ ಪ್ರಚಾರ ಮಾಡ್ಬೇಡಿ ಎನ್ನುವ ಹಕ್ಕು ಯಾರಿಗೂ ಇಲ್ಲ. ಒಂದಲ್ಲ ನೂರು ಕಾಂಗ್ರೆಸ್ ಬಾವುಟ ಹಿಡಿದು ಪ್ರಚಾರ ಮಾಡ್ತೀವಿ ಎಂದಿದ್ದಾರೆ.
ಗಂಗಾಧರ್ ಅವ್ರನ್ನ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದು ಅಂಬರೀಶ್. ಗಂಗಾಧರ್ ಅವರು ಅಂಬರೀಶ್ ಅವರ ಋಣ ತೀರಿಸಲು ನಮ್ಮೆಲ್ಲರಿಗಿಂತ ಮೊದಲು ಸುಮಲತಾ ಪರ ನಿಲ್ಲಬೇಕಿತ್ತು. ಹಾಲಿ ಎಂಪಿಗಳಿರುವ ಕ್ಷೇತ್ರಗಳನ್ನು ಆಯಾ ಪಕ್ಷಗಳಿಗೆ ಬಿಡುವುದಾಗಿ ಹೇಳಿ ತುಮಕೂರನ್ನ ಜೆಡಿಎಸ್ ಕಿತ್ತುಕೊಂಡಿದೆ.
ಮಂಡ್ಯದಲ್ಲಿ ಮೊಮ್ಮಗನನ್ನ ಬೆಳೆಸಲು ಕಾಂಗ್ರೆಸ್ಸನ್ನ ನಿರ್ನಾಮ ಮಾಡಲು ಹೊರಟಿದೆ ಎಂದು ಕೈ ಕಾರ್ಯಕರ್ತರು ದೂರಿದ್ದಾರೆ.