Publish Date: Fri, 05 Apr 2019 (18:32 IST)
Updated Date: Fri, 05 Apr 2019 (18:33 IST)
ಬಿಜೆಪಿ ಅಭ್ಯರ್ಥಿ ಸೂರ್ಯ ಎನ್ನೋರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ. ಅವನಿಗೆ ಸೂರ್ಯ ಅಲ್ಲ ಅಮವಾಸ್ಯೆ ಅಂತ ಕರಿಬೇಕು ಅಂತ ಮಾಜಿ ಸಿಎಂ ಭರ್ಜರಿ ಟಾಂಗ್ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಬೆಂಗಳೂರು ಸೌತ್ ನಲ್ಲೊಬ್ಬನಿಗೆ ಟಿಕೇಟ್ ಕೊಟ್ಟಿದ್ದಾರೆ. ತೇಜಸ್ವಿ ಸೂರ್ಯ ಅಂತ. ಅವನಿಗೆ ಸೂರ್ಯ ಅಲ್ಲ ಅಮಾವಾಸ್ಯೆ ಅಂತ ಕರಿಬೇಕು ಎಂದಿದ್ದಾರೆ.
ಅಂಬೇಡ್ಕರ್ ಪ್ರತಿಮೆ ಸುಡಬೇಕು ಅಂತ ಹೇಳ್ತಾನೆ ಅವನು ಎಂದ ಅವರು, ಸದಾನಂದಗೌಡಗೆ ನಗೋದೊಂದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಹಲ್ಲು ಕಿಸಿಯೋದು ಮಾತ್ರ ಗೊತ್ತು ಅಂತ ಲೇವಡಿ ಮಾಡಿದ್ರು.