Publish Date: Tue, 16 Apr 2019 (15:21 IST)
Updated Date: Tue, 16 Apr 2019 (15:23 IST)
ಬಿಜೆಪಿ ನಾಯಕರು ರಾಜ್ಯದ ಚುನಾವಣಾ ಪ್ರಚಾರದಲ್ಲಿ ಪ್ರಚೋದನಕಾರಿ ಹೇಳಿಕೆಯನ್ನೇ ನೀಡುತ್ತಿದ್ದಾರೆ. ಇದು ಬಿಜೆಪಿಯವರ ಹತಾಶೆ ಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ದೂರಿದೆ.
ಶಾಸಕ ಸಿ.ಟಿ.ರವಿ ಮಾತನಾಡಿರುವ ವೇಳೆ ಮೋದಿ ಬೆಂಬಲಿಸದೇ ಇರೋರು ತಾಯಿಗಂಡರು ಅಂದಿದ್ದಾರೆ. ಇಂತಹ ಹೇಳಿಕೆಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಅಂತ ಕಾಂಗ್ರೆಸ್ ಮುಖಂಡಪ್ರಕಾಶ್ ರಾಥೋಡ್ ಟೀಕೆ ಮಾಡಿದ್ದಾರೆ.
ರಾಷ್ಟ್ರ ಬಿಜೆಪಿ ನಾಯಕರು ಸಹ ಅವಹೇಳನಕಾರಿ ಹೇಳಿಕೆ ನೀಡುತ್ತಿರೋದು ಅವರ ಹತಾಶ ಮನೋಭಾವನೆಗೆ ಸಾಕ್ಷಿ.
ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಎಐಸಿಸಿ ಬಿಡುಗಡೆಗೊಳಿಸಿದ ಜನಪರ ಪ್ರಣಾಳಿಕೆ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ.
ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಬರಿ ಅವಹೇಳನಕಾರಿ ಹೇಳಿಕೆ ನೀಡಲು ಆರಂಭಿಸಿದ್ದಾರೆ ಎಂದಿದ್ದಾರೆ.