ಗರ್ಭಿಣಿ, ಮಗುವಿಗೆ ಗಂಡನೇ ಬೆಂಕಿ ಇಟ್ಟನಾ?

ಶುಕ್ರವಾರ, 26 ಏಪ್ರಿಲ್ 2019 (11:11 IST)
ಗರ್ಭಿಣಿ ಹಾಗೂ 3 ವರ್ಷದ ಹೆಣ್ಣು ಮಗಳೊಬ್ಬಳನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ. ಘಟನೆಯಲ್ಲಿ ಆರು ತಿಂಗಳ ಗರ್ಭಿಣಿ ಹಾಗೂ ಅವರ ಮಗಳು ಸಾವನ್ನಪ್ಪಿದ್ದಾರೆ.

ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಹಾಲಕ್ಷ್ಮೀ (24), ಪ್ರಣೀತಾ (3) ಸಾವನ್ನಪ್ಪಿದ್ದಾರೆ. ಪತಿ ಹಾಗೂ ಪತಿಯ ಕುಟುಂಬದವರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಸೋಮಶೇಖರ್ ಎಂಬುವರನ್ನು ಮಹಾಲಕ್ಷ್ಮೀ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆಗಾಗ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು ಎನ್ನಲಾಗಿದೆ. ಗಂಡನ ಮನೆಯವರು ಗರ್ಭಿಣಿ ಮತ್ತು ಮಗುವಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ ಶಾಸಕನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು