Publish Date: Thu, 25 Apr 2019 (07:16 IST)
Updated Date: Thu, 25 Apr 2019 (07:19 IST)
ಬೆಂಗಳೂರು: ಎಬಿಡಿ ವಿಲಿಯರ್ಸ್ ಬ್ಯಾಟಿಂಗ್ ಅಬ್ಬರ ಮತ್ತು ಬೌಲರ್ ಗಳ ಬೆಂಕಿ ಎಸೆತಕ್ಕೆ ಆರ್ ಸಿಬಿ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 17 ರನ್ ಗಳಿಂದ ಸೋಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಕೊಹ್ಲಿ ವಿಕೆಟ್ ಬೇಗನೇ ಕಳೆದುಕೊಂಡು ಆಘಾತಕ್ಕೊಳಗಾಯಿತು. ಆದರೆ ನಂತರ ಬ್ಯಾಟಿಂಗ್ ಗಿಳಿದ ಎಬಿಡಿ ವಿಲಿಯರ್ಸ್ 44 ಎಸೆತಗಳಲ್ಲಿ 82 ರನ್ ಸಿಡಿಸಿದರು. ಆ ಮೂಲಕ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣ ತಮ್ಮ ಪಾಲಿಗೆ ಲಕ್ಕಿ ಎಂದು ಸಾಬೀತುಪಡಿಸಿದರು. ಇವರ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಂಜಾಬ್ ಪರ ನಿಕಲಸ್ ಪೂರನ್ 46, ಕೆಎಲ್ ರಾಹುಲ್ 42 ಮತ್ತು ಮಯಾಂಕ್ ಅಗರ್ವಾಲ್ 35 ರನ್ ಗಳಿಸಿದರು. ಆರ್ ಸಿಬಿ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ನವದೀಪ್ ಸೈನಿ 4 ಓವರ್ ಗಳಲ್ಲಿ 33 ರನ್ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್ ಕಿತ್ತರೆ, ಉಮೇಶ್ ಯಾದವ್ 3 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
Krishnaveni K
Publish Date: Thu, 25 Apr 2019 (07:16 IST)
Updated Date: Thu, 25 Apr 2019 (07:19 IST)