ಚೆನ್ನೈ: ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್ ಪಂದ್ಯದಲ್ಲಿ ಮತ್ತೆ ಧೋನಿ ತಮ್ಮ ವಿಕೆಟ್ ಕೀಪಿಂಗ್ ಜಾದೂ ಮಾಡಿದ್ದಾರೆ.
ಅಪಾಯಕಾರಿಯಾಗಿದ್ದ ಡೇವಿಡ್ ವಾರ್ನರ್ ರನ್ನು ಮಿಂಚಿನ ಸ್ಟಂಪಿಂಗ್ ಔಟ್ ಮಾಡುವ ಮೂಲಕ ಧೋನಿ ತಮ್ಮ ತಂಡಕ್ಕೆ ಬೇಕಾಗಿದ್ದ ಬ್ರೇಕ್ ಒದಗಿಸಿದ್ದಾರೆ. ಮನೀಶ್ ಪಾಂಡೆ ಜತೆಗೂಡಿ ಭರ್ಜರಿಯಾಗಿ ಆಡುತ್ತಿದ್ದ ವಾರ್ನರ್ 45 ಎಸೆತಗಳಲ್ಲಿ 57 ರನ್ ಗಳಿಸಿದ್ದಾಗ ಸ್ಟಂಪ್ ಔಟ್ ಆದರು.
ಹರ್ಭಜನ್ ಸಿಂಗ್ ಬೌಲಿಂಗ್ ನಲ್ಲಿ ಸಿಕ್ಸರ್ ಹೊಡೆಯಲು ಕೂದಲೆಳೆಯಷ್ಟು ಕ್ರೀಸ್ ನಿಂದ ಕಾಲು ಮುಂದೆ ಇಟ್ಟಿದ್ದ ವಾರ್ನರ್ ರನ್ನು ಧೋನಿ ಕಣ್ಣು ಮಿಟುಕಿಸುವಷ್ಟರಲ್ಲಿ ಸ್ಟಂಪ್ ಔಟ್ ಮಾಡಿದ ಧೋನಿ ಮ್ಯಾಜಿಕ್ ಗೆ ಸ್ವತಃ ವಾರ್ನರ್ ಅಚ್ಚರಿಪಡುತ್ತಾ ಪೆವಿಲಿಯನ್ ಗೆ ಮರಳಬೇಕಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ