Publish Date: Wed, 24 Apr 2019 (07:32 IST)
Updated Date: Wed, 24 Apr 2019 (07:33 IST)
ಚೆನ್ನೈ: ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಒಂದೇ ರನ್ ಗೆ ಸೋತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಒಂದು ಎಸೆತ ಬಾಕಿ ಇರುವಾಗ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಡೇವಿಡ್ ವಾರ್ನರ್ (57) ಮತ್ತು ಮನೀಶ್ ಪಾಂಡೆ (83) ಅಬ್ಬರ ಬ್ಯಾಟಿಂಗ್ ನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈಗೆ ಶೇನ್ ವ್ಯಾಟ್ಸನ್ ಅಬ್ಬರ ಸಹಾಯ ಮಾಡಿತು. ವ್ಯಾಟ್ಸನ್ 53 ಎಸೆತಗಳಲ್ಲಿ 96 ರನ್ ಗಳಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಸುರೇಶ್ ರೈನಾ 38 ಮತ್ತು ಅಂಬಟಿ ರಾಯುಡು 21 ರನ್ ಗಳಿಸಿದರು. ಅಂತಿಮವಾಗಿ ಸಿಎಸ್ ಕೆ 19.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಇದರೊಂದಿಗೆ 6 ವಿಕೆಟ್ ಗಳ ಜಯ ಸಾಧಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
Krishnaveni K
Publish Date: Wed, 24 Apr 2019 (07:32 IST)
Updated Date: Wed, 24 Apr 2019 (07:33 IST)