Publish Date: Fri, 03 May 2019 (12:10 IST)
Updated Date: Fri, 03 May 2019 (12:13 IST)
ತುಮಕೂರು : ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಪೋಷಕರೇ ಅಪ್ರಾಪ್ತ ಪುತ್ರಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಿಂದ ಇದೀಗ ಅಸಲಿ ವಿಚಾರ ತಿಳಿದುಬಂದಿದೆ.
ಕುರಿಹಳ್ಳಿ ಗ್ರಾಮದ ಬಸವಲಿಂಗಯ್ಯ, ಸುಶೀಲಮ್ಮ ದಂಪತಿಗಳು ತಮ್ಮ 15 ವರ್ಷದ ಮಗಳನ್ನು 10 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಅಲ್ಲದೇ ಲೈಂಗಿಕವಾಗಿ ಬಳಸಿಕೊಳ್ಳಲು ಅನುಮತಿ ಕೊಟ್ಟು ಬಾಂಡ್ ಪೇಪರಲ್ಲಿ ಸಹಿ ಹಾಕಿದ್ದಾರೆ ಎಂದು ಅವರ ಅಳಿಯ ರಾಜಶೇಖರ್ ಕೆಲ ದಾಖಲೆ ಸಹಿತ ಆರೋಪ ಮಾಡಿದ್ದನು.
ಈ ಪ್ರಕರಣದ ತನಿಖೆ ಕೈಗೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರಿಗೆ ಇದೀಗ ಆರೋಪ ಮಾಡಿದ ಅಳಿಯ ರಾಜಶೇಖರ್ ನ ನವರಂಗಿ ಆಟ ತಿಳಿದುಬಿಟ್ಟಿದೆ. ಅಕ್ಕನ ಜೊತೆಗೆ ತಂಗಿಯನ್ನೂ ಮದುವೆಯಾಗಿ ಆಸ್ತಿ ಕಬಳಿಸಲು ಅತ್ತೆ-ಮಾವನ ವಿರುದ್ಧವೇ ಇಂತಹ ಆರೋಪ ಮಾಡಿ ಆತನೇ ನಕಲಿ ದಾಖಲೆ ಸೃಷ್ಟಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.