Select Your Language

Notifications

webdunia
webdunia
webdunia
webdunia

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕರೆಂಟ್ ಶಾಕ್ ಕೊಟ್ಟು ಕೊಂದ ಅಪ್ರಾಪ್ತ

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕರೆಂಟ್ ಶಾಕ್ ಕೊಟ್ಟು ಕೊಂದ ಅಪ್ರಾಪ್ತ
ಚೆನ್ನೈ , ಸೋಮವಾರ, 29 ಏಪ್ರಿಲ್ 2019 (07:14 IST)
ಚೆನ್ನೈ : ಅಪ್ರಾಪ್ತ ಬಾಲಕನೊಬ್ಬ ಪಕ್ಕದ ಮನೆಯ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕರೆಂಟ್ ಶಾಕ್ ಕೊಟ್ಟು ಕೊಂದ ಘಟನೆ ತಮಿಳುನಾಡಿನ ಉತ್ತರ ಮದುರೈ ಪ್ರದೇಶದ ದಿಂಡಿಗಲ್ ಬಳಿ ನಡೆದಿದೆ.

ಬಾಲಕಿಯ ಪೋಷಕರು ಆಕೆಯನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋದ ವೇಳೆ ಮನೆಗೆ ನುಗ್ಗಿದ ಆರೋಪಿ ಬಾಲಕ, ಬಾಲಕಿ ಮೇಲೆ ಹಲ್ಲೆ ನಡೆಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆಯಿಂದ ಬಳಿಕ ಪ್ರಜ್ಞೆ ಕಳೆದುಕೊಂಡ ಬಾಲಕಿಯನ್ನು ಕಂಡು ಆಕೆ ವಿಚಾರವನ್ನು ಪೋಷಕರಿಗೆ ತಿಳಿಸುತ್ತಾಳೆ ಎಂದು ಹೆದರಿ ಆಕೆಯ ಬಾಯಿಗೆ ವಿದ್ಯುತ್ ತಂತಿಯನ್ನು ಇಟ್ಟು ಅಲ್ಲಿಂದ  ಪರಾರಿಯಾಗಿದ್ದಾನೆ.

 

ಬಾಲಕಿಯ ಪೋಷಕರು ಮನೆಗೆ ಬಂದಾಗ ಬಾಲಕಿ ವಿದ್ಯುತ್ ಶಾಕ್ ನಿಂದ ಮೃತ ಪಟ್ಟಿದ್ದಾಳೆ ಎಂದು ತಿಳಿದು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಬಾಲಕಿಯ ದೇಹದಲ್ಲಿದ್ದ ರಕ್ತದ ಕಲೆಗಳನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

 

ತಕ್ಷಣ ಪೊಲೀಸರು ಪೋಷಕರನ್ನು ವಿಚಾರಿಸಿದಾಗ ಪಕ್ಕದ ಮನೆಯ ಬಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

 


Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕನೇ ಹಂತದ ಚುನಾವಣೆಗೆ ಇಂದು 9 ರಾಜ್ಯದ 72 ಕ್ಷೇತ್ರಗಳಲ್ಲಿ ಮತದಾನ