Publish Date: Sat, 27 Apr 2019 (17:06 IST)
Updated Date: Sat, 27 Apr 2019 (17:08 IST)
ಆಕೆ ಇನ್ನೂ ಶಾಲೆ ಕಲಿಯಬೇಕಾದ ವಯಸ್ಸು. ಆದರೆ ಆತನ ಮನಸ್ಸು ಕಾಮ ತುಂಬಿಕೊಂಡ ಪರಿಣಾಮ ಮಾಡಬಾರದ್ದನ್ನು ಮಾಡಿದ್ದಾನೆ.
ಪ್ರೀತಿ, ಪ್ರೇಮ ಅಂತೆಲ್ಲ ಅಪ್ರಾಪ್ತೆಯನ್ನು ನಂಬಿಸಿ ಹಾಗೂ ಮದುವೆಯಾಗುವುದಾಗಿ ಹೇಳಿ ಅಪ್ರಾಪ್ತೆಯೊಬ್ಬಳನ್ನು ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ.
ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ಈ ಘಟನೆ ನಡೆದಿದೆ.
ಯಡ್ರಾಮಿ ತಾಲೂಕಿನ ನಿವಾಸಿ ಸದಾನಂದ ವಿಶ್ವನಾಥ ಪತ್ತಾರ ಎಂಬಾತನೇ ಅತ್ಯಾಚಾರ ಎಸಗಿರುವ ಆರೋಪಿಯಾಗಿದ್ದಾನೆ.
ಅಪ್ರಾಪ್ತೆಯನ್ನು ಪುಸಲಾಯಿಸಿ ವಿಜಯಪುರ ಜಿಲ್ಲೆಯ ತಾಳಿಕೋಟಿಯ ತಮ್ಮನದೊಡ್ಡಿ ಎಂಬ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ನಡೆಸಿದ್ದಾನೆ.
ಹೀಗಂತ ಆರೋಪಿಸಿ ಸಂತ್ರಸ್ಥೆಯ ಪಾಲಕರು ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.