Publish Date: Sat, 27 Apr 2019 (16:56 IST)
Updated Date: Sat, 27 Apr 2019 (16:59 IST)
ಮೈತ್ರಿ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಅವಕಾಶಕ್ಕಾಗಿ ವಿರೋಧ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡಿವೆ. ಅವರ ಕಾರ್ಯಯೋಜನೆ ವಿಫಲವಾಗಲಿದೆ ಎಂದು ದೂರಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಪ್ರಚಾರ ತೀವ್ರಗೊಳಿಸಿರುವ ಮೋದಿ, ಚುನಾವಣಾ ರ್ಯಾಲಿಗಳಲ್ಲಿ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ವಿರುದ್ಧ ಹರಿಹಾಯುತ್ತಿದ್ದಾರೆ. ಚೌಕಿದಾರ ಮತ್ತು ರಾಮಭಕ್ತರ ಮೇಲೆ ಮುಗಿ ಬೀಳಲು ವಿಪಕ್ಷಗಳು ಒಂದಾಗಿವೆ ಎಂದು ಟೀಕೆ ಮಾಡಿದರು.
ಮಹಾಕಲಬೆರಕೆಯ ಅವಕಾಶವಾದಿತನ ಇದಾಗಿದೆ ಎಂದ ಮೋದಿ, ವಿಪಕ್ಷಗಳು ಎಷ್ಟೇ ಪ್ರಯತ್ನ ಮಾಡಿದ್ರೂ ಬಿಜೆಪಿ ಗೆಲುವು ಖಚಿತ ಎಂದರು. ಇದೇ ವೇಳೆ ಜನರು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತೊಮ್ಮೆ ಮೋದಿ ಎಂದು ಘೋಷಣೆ ಕೂಗಿದರು.