Select Your Language

Notifications

webdunia
webdunia
webdunia
webdunia

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಮೇಲೆ ಎರಗಿದ ಐವರು ಕಾಮುಕರು

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಮೇಲೆ ಎರಗಿದ ಐವರು ಕಾಮುಕರು
ರಾಯ್ಪುರ , ಸೋಮವಾರ, 22 ಏಪ್ರಿಲ್ 2019 (05:08 IST)
ರಾಯ್ಪುರ : ಪೋಷಕರು ಮನೆಯಲ್ಲಿ ಇಲ್ಲದಿರುವದನ್ನು ಕಂಡು ಐವರು ಕಾಮುಕರು ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಛತ್ತೀಸ್‍ಗಢ ರಾಯ್ಗಢ ಜಿಲ್ಲೆಯಲ್ಲಿ ನಡೆದಿದೆ.


ಗೋಚರನ್ ರಥಿಯಾ (26), ಸಂಜಯ್ ರಥಿಯಾ (19), ಮಾಧವ ರಥಿಯಾ (21), ಸುಗನ್ ರಥಿಯಾ (21) ಮತ್ತು ನೂತನ್ ರಥಿಯಾ(19) ಅತ್ಯಾಚಾರ ಎಸಗಿದ ಆರೋಪಿಗಳಾಗಿದ್ದು, ಸಂತ್ರಸ್ತೆ ಪೋಷಕರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ತಮ್ಮ ತೋಟಕ್ಕೆ ತೆರಳಿ ಬೆಳೆಗಳನ್ನು ಕಾವಲು ಕಾಯುತ್ತಿದ್ದ ವೇಳೆ ಆರೋಪಿಗಳು ಏಕಾಏಕಿ ಅವರ ಮನೆಗೆ ನುಗ್ಗಿ ದರೋಡೆ ಮಾಡಿದ್ದಲ್ಲದೇ 15 ವರ್ಷದ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.


ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ಪೋಷಕರು ತಕ್ಷಣ ಘರ್ಘೋಡಾ ಪೊಲೀಸ್ ಠಾಣಾಯಲ್ಲಿ ದೂರು ನೀಡಿದ್ದು, ಈ ದೂರಿನ ಅನ್ವಯ ವಿರುದ್ಧ ಐಪಿಸಿ ಸೆಕ್ಷನ್ 376ಡಿ (ಗ್ಯಾಂಗ್ ರೇಪ್) ಮತ್ತು ಪೋಕ್ಸೋ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತರಾಷ್ಟ್ರೀಯ ಕಾಳ ಸಂತೆಯಲ್ಲಿ ಈ ಹಲ್ಲಿಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?