ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಗೆ ನಾಲ್ಕು ಜನರು ಮಾಡಿದ್ರು ರೇಪ್

ಮಂಗಳವಾರ, 23 ಏಪ್ರಿಲ್ 2019 (14:53 IST)
ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ಅಪಹರಿಸಿ ರಾತ್ರಿ ಪೂರ್ಣ ನಾಲ್ವರು ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.

ಹರಿಯಾಣದ ಗುರುಗ್ರಾಮದಲ್ಲಿ ಈ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಾಗ್ಪತ್ ನ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ.

28 ವರ್ಷದ ಯುವತಿಯನ್ನು ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ತನ್ನ ಬಳಿ ಕರೆಸಿಕೊಂಡಿದ್ದ. ಆ ಬಳಿಕ ತನ್ನ ಗೆಳೆಯರ ಸಹಾಯದಿಂದ ಗನ್ ತೋರಿಸಿ ಬೆದರಿಸಿ ಅಪಹರಣ ಮಾಡಿದ್ರು. ತದನಂತರ ಮನೆಯೊಂದಕ್ಕೆ ಕರೆದುಕೊಂಡು ಸಾಮೂಹಿಕವಾಗಿ ನಾಲ್ವರು ಅತ್ಯಾಚಾರ ಎಸಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಿಪಿನ್ ಮತ್ತು ಆಶಿಶ್ ಎಂಬುವರನ್ನು ಬಂಧನ ಮಾಡಲಾಗಿದೆ. ಉಳಿದಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಾಯಿ ಸತ್ತರೂ ವೋಟ್ ಹಾಕಿ ಮಾದರಿಯಾದ ಮಗ