Select Your Language

Notifications

webdunia
webdunia
webdunia
webdunia

ಬಾಲಕಿ ರೇಪ್ ಕೇಸ್ ಗೆ ಟ್ವಿಸ್ಟ್: ಆರೋಪಿ ಸೆಲ್ಫಿ ಮಾಡಿ ಆತ್ಮಹತ್ಯೆ

ಬಾಲಕಿ ರೇಪ್ ಕೇಸ್ ಗೆ ಟ್ವಿಸ್ಟ್: ಆರೋಪಿ ಸೆಲ್ಫಿ ಮಾಡಿ ಆತ್ಮಹತ್ಯೆ
ಹಾಸನ , ಭಾನುವಾರ, 28 ಏಪ್ರಿಲ್ 2019 (15:21 IST)
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದ್ದು, ಆರೋಪಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅಪರಿಚಿತ ಬಾಲಕಿ ಅಪಹರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ದೂರು ನೀಡಿದ್ದರು ಬಾಲಕಿ ಪೋಷಕರು. ಈ ಕುರಿತು ಸಕಲೇಶಪುರ ‌ಗ್ರಾಮಾಂತರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾನು ತಪ್ಪು ಮಾಡಿಲ್ಲಾ ಎಂದು‌ ವೀಡಿಯೋ ಮಾಡಿ ಆರೋಪಿ ಸಂದೀಪ್ ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ. ಮನೆ ಸಮೀಪವೇ ಅವಳೇ ನನ್ನನ್ನ ಕರೆದಿದ್ದಳು. ಹೀಗಾಗಿ  ನಾನು ಹೋದೆ. ನಾನು ಏನೂ ತಪ್ಪು ಮಾಡಿಲ್ಲ, ಅದಕ್ಕೆ ವಿಷ ಕುಡಿಯುತ್ತಿದ್ದೇನೆ ಎಂದಿದ್ದಾನೆ.

ಅಪ್ಪಾ ಅಮ್ಮ ಎಲ್ಲರೂ ನನ್ನ ಕ್ಷಮಿಸಿ ಎಲ್ಲರಿಗೂ ಬೈ ಎಂದು‌‌ ವಿಷ‌ ಸೇವಿಸಿದ್ದಾನೆ ಯುವಕ.

ಡ್ರಾಪ್‌ ನೀಡೋ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿರುವ ಆರೋಪವನ್ನು ಸಂದೀಪ್ ಎದುರಿಸುತ್ತಿದ್ದಾನೆ.

ಕೇಸ್ ದಾಖಲಾಗುತ್ತಿದ್ದಂತೆ ಸೆಲ್ಫಿ ವೀಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ. ಅಸ್ವಸ್ಥ ಸಂದೀಪ್‌ಗೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೇಸ್ ನಿಂದ ಮನನೊಂದು ಆತ್ಮಹತ್ಯೆ ಯತ್ನ ನಡೆಸಿದ್ದಾನೆ.




Share this Story:

Follow Webdunia kannada

ಮುಂದಿನ ಸುದ್ದಿ

ತುಂಬೆ ವೆಂಟೆಡ್ ಡ್ಯಾಂಗೆ ಏನಾಗಿದೆ?