Publish Date: Sun, 28 Apr 2019 (14:54 IST)
Updated Date: Sun, 28 Apr 2019 (19:00 IST)
ರಾಜ್ಯದಲ್ಲಿ ಇನ್ನೂ ನಿಂತಿಲ್ಲ ಬಾಲ್ಯ ವಿವಾಹ ಎನ್ನುವುದಕ್ಕೆ ಮತ್ತೆ ಸಾಕ್ಷಿಗಳು ದೊರಕುತ್ತಿವೆ.
ಗಡಿ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ ಬಾಲ್ಯ ವಿವಾಹಗಳು. ಆದರೂ ಕಣ್ಣು ಮುಚ್ಚಿ ಕೂತ ಅಧಿಕಾರಿಗಳ ಕ್ರಮಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಯಗವಬಂಡ್ಲ ಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. 16 ವರ್ಷದ ಭವಾನಿ ಎಂಬ ಬಾಲಕಿಯ ಮದುವೆ ಅದೇ ಗ್ರಾಮದಲ್ಲಿ ಇಂದು ನಡೆದಿದೆ.
ಇದೇ ವರ್ಷ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದಾಳೆ ಭವಾನಿ.
ದೇವನಹಳ್ಳಿ ತಾಲ್ಲೂಕು ಬೂದಿಗೆರೆ ಗ್ರಾಮದ 32 ವರ್ಷದ ವ್ಯಕ್ತಿ ಜೊತೆ ಮದುವೆಯಾಗಿದೆ. ಬಾಗೇಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಬಾಲಕಿಯನ್ನು ಬಾಲ್ಯ ವಿವಾಹ ಮಾಡಿಕೊಡಲಾಗಿದೆ.