Select Your Language

Notifications

webdunia
webdunia
webdunia
webdunia

ಮೊಮ್ಮಗಳೊಂದಿಗೆ ಆಟವಾಡುತ್ತಿದ್ದ ಬಾಲಕಿಯ ಮೇಲೆರಗಿದ ಕಾಮುಕ

ಮೊಮ್ಮಗಳೊಂದಿಗೆ ಆಟವಾಡುತ್ತಿದ್ದ ಬಾಲಕಿಯ ಮೇಲೆರಗಿದ ಕಾಮುಕ
ಬೆಂಗಳೂರು , ಗುರುವಾರ, 2 ಮೇ 2019 (06:30 IST)
ಬೆಂಗಳೂರು : ವ್ಯಕ್ತಿಯೊಬ್ಬ ಮೊಮ್ಮಗಳೊಂದಿಗೆ ಆಟವಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.




ಬೆಂಗಳೂರಿನ ನಾರಾಯಣಸ್ವಾಮಿ ಲೇಔಟಿನ ಮೊಹಮ್ಮದ್ ಅನ್ವರ್ ಎಂಬಾತನೇ ಅತ್ಯಾಚಾರ ಎಸಗಿದ ಕಾಮುಕನಾಗಿದ್ದು, ಈತ ತನ್ನ ಮೊಮ್ಮಗಳೊಂದಿಗೆ ಪಕ್ಕದ ಮನೆಯ 9 ವರ್ಷದ ಬಾಲಕಿ ಆಡಲು ಬಂದ ವೇಳೆ ಆಕೆಯನ್ನು ಪುಸಲಾಯಿಸಿ ಮನೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.


ಬಳಿಕ ಮನೆಗೆ ಹೋದ ಬಾಲಕಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ  ಕಾರಣ ಪೋಷಕರು ಆಸ್ಪತ್ರೆಗೆ ಹೋಗಿ ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ.


ಆಗ ಪೋಷಕರು ಕಾಮುಕನನ್ನು ಥಳಿಸಲು ಮುಂದಾಗುತ್ತಿದ್ದಂತೆ ಆತ ತಪ್ಪಿಸಿಕೊಂಡಿದ್ದಾನೆ. ತಕ್ಷಣ ಅವರು  ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಕ್ತಿಯೊಬ್ಬ ಮಾಜಿ ಗೆಳತಿ ಮನೆಯೊಳಗೆ ಸುರಂಗ ತೋಡಿದ್ದೇಕೆ ಗೊತ್ತಾ?