Select Your Language

Notifications

webdunia
webdunia
webdunia
webdunia

ವಾಸ್ತು ದೋಷ ನಿವಾರಣೆಗೆ ಮನೆಯ ಸುತ್ತಮುತ್ತ ಬೆಳೆಸಿ ಈ ಗಿಡಮರ

ವಾಸ್ತು ದೋಷ ನಿವಾರಣೆಗೆ ಮನೆಯ ಸುತ್ತಮುತ್ತ ಬೆಳೆಸಿ ಈ ಗಿಡಮರ
ಬೆಂಗಳೂರು , ಬುಧವಾರ, 1 ಮೇ 2019 (06:47 IST)
ಬೆಂಗಳೂರು : ಮನೆಗೆ ವಾಸ್ತು ಬಹಳ ಮುಖ್ಯ. ಮನೆಯ ವಾಸ್ತು ಸರಿಯಾಗಿದ್ದರೆ ಆ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಮನೆಯ ಒಳಗಡೆ ಮಾತ್ರವಲ್ಲ, ಮನೆಯ ಹೊರಗಡೆ ಕೂಡ ಕೆಲವು ಗಿಡಮರಗಳನ್ನು ಬೆಳೆಸುವುದರ ಮೂಲಕ ಮನೆಯ ವಾಸ್ತು ದೋಷವನ್ನು ನಿವಾರಿಸಬಹುದು.



ಹೌದು. ಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು, ಅಂತಿದ್ದರೆ ಪಶ್ಚಿಮ ದಿಕ್ಕಿನಲ್ಲಿ ತೆಂಗಿನ ಗಿಡ, ಉತ್ತರಕ್ಕೆ ಮಾವಿನ ಗಿಡ, ದಕ್ಷಿಣಕ್ಕೆ ಅಡಿಕೆ ಮರ ಮತ್ತು ಪೂರ್ವಕ್ಕೆ ಹಲಸಿನ ಮರವನ್ನು ನೆಡಬೇಕು ಎಂದು  ವಾಸ್ತುಶಾಸ್ತ್ರ ಹೇಳುತ್ತದೆ. ಒಂದು  ವೇಳೆ ಈ ಮರಗಳನ್ನು ಬೆಳೇಸಲು ಆಗದಿದ್ದರೆ ಮನೆಯ ಪೂರ್ವದಿಕ್ಕಿನ ಬಾಗಿಲಿಗೆ ಎದುರಾಗಿ ಮಂತ್ರಪೂರಿತ ಪೂರ್ಣಫಲವನ್ನು ಕಟ್ಟುವುದರಿಂದ, ಉತ್ತರ ದಿಕ್ಕಿನಲ್ಲಿ ಅಡುಕೆಯ ಹೊಂಬಾಳೆಯನ್ನು ಸಿಲುಕಿಸುವುದರಿಂದ ದೋಷ ನಿವಾರಣೆಯಾಗುತ್ತದೆ.

 

ಹಾಗೇ ಮನೆಗೆ ಲಕ್ಷ್ಮೀಕಟಾಕ್ಷ ದೊರೆಯಬೇಕೆಂದರೆ ,ಮನೆಯ ಪೂರ್ವದಲ್ಲಿ ಬಿಲ್ವ ವೃಕ್ಷವನ್ನು ಬೆಳೆಸಬೇಕು. ಹಾಗೇ ನೆಲ್ಲಿಕಾಯಿ ಮರವನ್ನು ಮನೆಯ ಎದುರು ಬೆಳೆಸಿದರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಔದುಂಬರ ವೃಕ್ಷವನ್ನು ಬೆಳೆಸಿದರೆ ಗುರುವಿನ ಅನುಗ್ರಹ ಹಾಗೂ ವಾಸ್ತುದೋಷ ಪರಿಹಾರವಾಗುತ್ತದೆ.ಶಿವನ ಅನುಗ್ರಹ ಹೊಂದಲು ಬಿಳಿ ತುಂಬೆ ಹೂವಿನ ಗಿಡವನ್ನು ಮನೆಯಲ್ಲಿ ಬೆಳೆಸಿ.

 

ಮನೆಯ ಅಭಿವೃದ್ಧಿಗೆ ವಿಳ್ಯೇದೆಲೆ ಗಿಡ, ಜಾಜಿ ಗಿಡ, ಮಲ್ಲಿಗೆ ಗಿಡ, ಚಂದನ ಅಥವಾ ಶ್ರೀಗಂಧದ ಮರವನ್ನು ಬೆಳೆಸುವುದು ಒಳ್ಳೆಯದು.  ಮನಿಪ್ಲಾಂಟ್‌ ನ್ನು ಮನೆಯೊಳಗೆ ಇಟ್ಟು ಬೆಳೆಸಿದರೆ ಸಕಲ ವಾಸ್ತು ದೋಷಗಳು ನಿವಾರಣೆಯಾಗಿ, ಕೌಟುಂಬಿಕ ಶಾಂತಿ ನೆಲೆಸುತ್ತದೆ. ಮನೆಯ ಎದುರು ಬಿಳಿ ಎಕ್ಕದ ಗಿಡವನ್ನು ಬೆಳೆಸಿದರೆ ಗಣಪತಿಯ ಅನುಗ್ರಹ ಉಂಟಾಗುತ್ತದೆ.

 

ಮನೆಯ ಬಲಬದಿಯಲ್ಲಿ ಗರಿಕೆ ಬೆಳೆಸಿದರೆ ಲಕ್ಷ್ಮೀ ಗಣಪತಿಯ ಅನುಗ್ರಹ ಉಂಟಾಗುತ್ತದೆ. ಬಿಲ್ವ ಪತ್ರೆಯ ತೋರಣವನ್ನು ಮನೆಯ ಮುಂಬಾಗಿಲು ಹಾಗೂ ದೇವರ ಮನೆಗೆ ಕಟ್ಟುವುದರಿಂದಲೂ ವಾಸ್ತುದೋಷ ನಿವಾರಣೆಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


 

 

 


Share this Story:

Follow Webdunia kannada

ಮುಂದಿನ ಸುದ್ದಿ

ಯಾವ ದೇವರಿಗೆ ಯಾವ ಬಣ್ಣ ಇಷ್ಟ ಎಂಬುದು ತಿಳಿಬೇಕಾ?