Select Your Language

Notifications

webdunia
webdunia
webdunia
webdunia

ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ವ್ಯಕ್ತಿ ಅರೆಸ್ಟ್

ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ವ್ಯಕ್ತಿ ಅರೆಸ್ಟ್
ಮುಂಬೈ , ಮಂಗಳವಾರ, 14 ಮೇ 2019 (07:30 IST)
ಮುಂಬೈ : ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಮಹಿಳೆಯಿಂದ ಹಣ ದೋಚಲು ತನ್ನ ಮರ್ಮಾಂಗ ತೋರಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.




ಮುಂಬೈನ ಕೋಪ್ರಿ ನಿವಾಸಿ ಸಂದೀಪ್ ಕುಂಭಕರ್ಣ (38) ಬಂಧಿತ ಆರೋಪಿಯಾಗಿದ್ದು, ಹರಿ ಓಂ ನಗರದ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆಯೊಬ್ಬರು ಹಣ ಡ್ರಾ ಮಾಡುತ್ತಿದ್ದಾಗ ಅಲ್ಲಿಗೆ ಬಂದ  ಸಂದೀಪ್ ತನ್ನ ಮರ್ಮಾಂಗವನ್ನು ತೋರಿಸಿ ಅದಕ್ಕಾಗಿ ಹಣ ನೀಡುವಂತೆ ಒತ್ತಾಯಿಸಿದ. ತಕ್ಷಣ ಮಹಿಳೆ ಈ ದೃಶ್ಯವನ್ನು ತನ್ನ ಮೊಬೈಲ್‍ ನಲ್ಲಿ ಸೆರೆ ಹಿಡಿದಿದ್ದಾಳೆ. ಇದರಿಂದ ಮುಜುಗುರಕ್ಕೆ ಒಳಗಾದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.


ಬಳಿಕ ಮಹಿಳೆ ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿಗೆ ವಿಡಿಯೋ ತೋರಿಸಿದ್ದಾಳೆ. ಕೂಡಲೇ ಜಾಗೃತರಾದ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಈ ಸಂಬಂಧ ಸಂದೀಪ್ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಮಾನಭಂಗಕ್ಕೆ ಯತ್ನ), 509 (ಮಹಿಳೆಯ ಮುಂದೆ ಅಸಭ್ಯ ರೀತಿ ವರ್ತನೆ) ಅಡಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಸಮಾವೇಶದಲ್ಲಿ ಮಾತನಾಡಿ ಗಂಟಲಿಗೆ ಅಪಾಯ ತಂದುಕೊಂಡ ನವಜೋತ್ ಸಿಂಗ್ ಸಿಧು!