Publish Date: Tue, 07 May 2019 (18:12 IST)
Updated Date: Tue, 07 May 2019 (18:14 IST)
ಹಣ ದುಪ್ಪಟ್ಟು ಮಾಡಿಕೊಡುತ್ತೇವೆಂದು ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್ ಆಗಿದೆ.
ಇಬ್ಬರು ಮಹಿಳೆಯರು ಸೇರಿ ಹನ್ನೊಂದು ಜನ ಖತರ್ನಾಕ್ ಗ್ಯಾಂಗ್ ಬಂಧನವಾಗಿದೆ. ಅಮಾಯಕರನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದರು.
ಅಸಲಿ ನೋಟುಗಳನ್ನು ತೆಗೆದುಕೊಂಡು ನಕಲಿ ನೋಟುಗಳನ್ನು ನೀಡಿ ಪರಾರಿಯಾಗುತ್ತಿದ್ದ ಗ್ಯಾಂಗ್ ಇದಾಗಿದೆ.
ಲಕ್ಷಾಂತರ ರೂಪಾಯಿ ದುಪ್ಪಟ್ಟು ಮಾಡಿಕೊಡುತ್ತೇವೆ ಎಂದು ವಿವಿಧ ಕಡೆ ವಂಚನೆ ಮಾಡಿದ್ದಾರೆ.
ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಅನಂತಪುರ, ಕರ್ನಾಟಕದ ಮುರಗಮಲ್ಲದಲ್ಲಿ ಖದೀಮರ ಕೈಚಳಕ ನಡೆದಿದೆ.
ಖಚಿತ ಮಾಹಿತಿ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳಿಂದ ಒಂದು ಲಕ್ಷ ಎಪ್ಪತೈದು ಸಾವಿರ ವಶಕ್ಕೆ ಪಡೆದುಕೊಂಡಿದ್ದಾರೆ ಪೊಲೀಸರು. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.