Select Your Language

Notifications

webdunia
webdunia
webdunia
webdunia

ನಿಮಗೆ ಇಷ್ಟವಾದ ತಳಿಯ ಮಾವಿನ ಹಣ್ಣು ಸಿಗುತ್ತಿಲ್ಲ ಎಂದು ಬೇಸರದಲ್ಲಿದ್ದೀರಾ? ಅದಕ್ಕೆ ಪರಿಹಾರ ಇಲ್ಲಿದೆ ನೋಡಿ

ಬೆಂಗಳೂರು
ಬೆಂಗಳೂರು : ಪ್ರಸ್ತುತ ಮಾವಿನ ಹಣ್ಣಿನ ಸೀಸನ್ ಇದ್ದರೂ ನಮಗೆ ಇಷ್ಟವಾದ ತಳಿಯ ಮಾವಿನ ಹಣ್ಣು ಸಿಕ್ಕಿಲ್ಲ ಎಂದು ಬೇಸರದಲ್ಲಿರುವವರಿಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಸಿಹಿಸುದ್ದಿ ನೀಡಿದೆ.



ಹೌದು. ತಮಗೆ ಇಷ್ಟವಾದ ತಳಿಯ ಮಾವಿನ ಹಣ್ಣು ತಿನ್ನಬೇಕೆನಿಸಿದವರು ಆನ್ ಲೈನ್ ಮೂಲಕ ಬುಕ್ ಮಾಡಿದರೆ ನಿಮಗೆ ಬೇಕಾದ ತಳಿ ಮನೆ ಬಾಗಿಲಿಗೆ ಬರುತ್ತದೆ. ಇಂತಹ ಸೌಕರ್ಯವನ್ನು ನೀಡಲು ಇದೀಗ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮುಂದಾಗಿದೆ.

 

ಇದಕ್ಕಾಗಿ karsirimangoes.karnataka.gov.in ವೆಬ್ ಸೈಟ್ ಆರಂಭಿಸಿದೆ. ಮಾವು ಪ್ರಿಯರು ತಮಗೆ ಬೇಕಾದ ತಳಿಯನ್ನು ಆಯ್ಕೆ ಮಾಡಿಕೊಂಡು ಹಣ ಪಾವತಿಸಿದರೆ ಮನೆ ಬಾಗಿಲಿಗೆ ಮಾವಿನ ಹಣ್ಣು ಪೂರೈಕೆಯಾಗಲಿದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ದೇವೇಗೌಡರನ್ನ ಸೋಲಿಸೋ ಹುನ್ನಾರ ಮಾಡಿದ್ದಾರೆ- ಹೊಸ ಬಾಂಬ್ ಸಿಡಿಸಿದ ಮಾಜಿ ಶಾಸಕ ಸುರೇಶ್ ಗೌಡ