Daily Horoscope

Select Your Language

Notifications

webdunia
webdunia
webdunia
webdunia

ದಿನನಿತ್ಯ ಮಾಡುವ ಕೆಲಸದಿಂದ ಕೈಗಳ ಕೋಮಲತೆ ಹಾಳಾಗುತ್ತಿದೇಯಾ? ಹಾಗಾದ್ರೆ ಹೀಗೆ ಮಾಡಿ

ಬೆಂಗಳೂರು
ಬೆಂಗಳೂರು : ಕೈಗಳು ಕೋಮಲವಾಗಿದ್ದರೆ ಅವುಗಳ ಅಂದ ಹೆಚ್ಚಾಗುತ್ತದೆ. ಆದರೆ ಪ್ರತಿದಿನ ಮಾಡುವ ಕೆಲಸದಿಂದ ಕೈಗಳು ತನ್ನ ಕೋಮಲತೆಯನ್ನು ಕಳೆದುಕೊಳ್ಳುತ್ತಿವೆ. ಈ ಸಮಸ್ಯೆಯಿಂದ ಕೈಗಳ ಕೋಮಲತೆ ಕಾಪಾಡಲು ಹೀಗೆ ಮಾಡಿ.




*ಬಟ್ಟೆ ಒಗೆದಾಗ, ಪಾತ್ರೆ ತೊಳೆದಾಗ ಕೈಗಳು ಒರಟಾದಂತೆ ಕಂಡುಬರುತ್ತವೆ. ನಿಂಬೆರಸ ಸೇರಿಸಿದ ಉಗುರು ಬೆಚ್ಚಗಿನ ನೀರಲ್ಲಿ ಕೈತೊಳೆದು ಒಣ ಬಟ್ಟೆಯಲ್ಲಿ ಒರೆಸಿ ಆಲೀವ್‌ ಆಯಿಲ್‌ ಹಾಕಿಕೊಳ್ಳಿ ಕ್ಷ ಣಾರ್ಧದಲ್ಲೆ ನಿಮ್ಮ ಅಂಗೈ ಮೆತ್ತಗಾಗುವುದು.
*ಕೆಲವರ ಅಂಗೈಯಲ್ಲಿ ಹೊಟ್ಟು ತೆರನಾಗಿ ಪುಡಿ ಉದುರುವುದು ಆಗ ಪಾಮ್‌ ಎಣ್ಣೆಗೆ ಬಾದಾಮಿ ಎಣ್ಣೆ ಸೇರಿಸಿ ಕೈಗಳಿಗೆ ಮರ್ಧನ ಮಾಡುವುದರಿಂದ ಹೊಟ್ಟು ನಿವಾರಣೆ ಆಗುವುದು.


*ರಾತ್ರಿ ಮಲಗುವ ಮುನ್ನ ಹಾಲಿನ ಕೆನೆಗೆ ಚಿಟಕಿ ಅರಿಶಿಣ, ನಿಂಬೆರಸ, ಗ್ಲಿಸರೀನ್‌ ಸೇರಿಸಿ ಅಂಗೈಗೆ ಹಚ್ಚಿಕೊಳ್ಳಿ. ಕೈಗಳಲ್ಲಿನ ಬಿರುಕು, ಒರಟುತನ ಮಾಯವಾಗುವುದು.


*ಡಿಟೆರ್ಜೆಂಟ್‌ ಉಪಯೋಗಿಸಿ ಕೆಲಸ ಮಾಡುತ್ತಿದ್ದರೆ ಕೈಗಳಿಗೆ ಹಾನಿ ಆಗುವುದು ಖಂಡಿತ. ದಿನಕ್ಕೊಮ್ಮೆಯಾದರೂ ಬೇಯಿಸಿದ ಆಲೂಗಡ್ಡೆ ನೀರಲ್ಲಿ ಕೈಯನ್ನು ಹತ್ತು ನಿಮಿಷ ಮುಳುಗಿಸಿ ಆಲೂಸಿಪ್ಪೆಯಲ್ಲಿ ಕೈಗಳನ್ನು ಉಜ್ಜಿ. ಚರ್ಮ ಒರಟಾಗದೆ ಇರುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಬೇಗ ಮುಟ್ಟಾಗಲು ಇವುಗಳನ್ನು ಸೇವಿಸಿ