Select Your Language

Notifications

webdunia
webdunia
webdunia
webdunia

ರಾಜೀವ್ ಗಾಂಧಿಯನ್ನು ನಂ.1 ಭ್ರಷ್ಟಾಚಾರಿ ಎಂದ ಪ್ರಧಾನಿ ಮೋದಿ ಮೇಲೆ ಗರಂ ಆದ ಸಿದ್ಧರಾಮಯ್ಯ

ರಾಜೀವ್ ಗಾಂಧಿಯನ್ನು ನಂ.1 ಭ್ರಷ್ಟಾಚಾರಿ ಎಂದ ಪ್ರಧಾನಿ ಮೋದಿ ಮೇಲೆ ಗರಂ ಆದ ಸಿದ್ಧರಾಮಯ್ಯ
ಬೆಂಗಳೂರು , ಸೋಮವಾರ, 6 ಮೇ 2019 (11:25 IST)
ಬೆಂಗಳೂರು : ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯನ್ನು ನಂ.1 ಭ್ರಷ್ಟಾಚಾರಿ ಎಂದ ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.




ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಮೋದಿ ಆಡಳಿತ ಅಂತ್ಯವಾಗುತ್ತಿದ್ದು, ವಿನಾಶಕಾಲದಲ್ಲಿ ವಿಪರೀತ ಬುದ್ಧಿ ಎಂಬಂತೆ ಮಾತನಾಡುತ್ತಿದ್ದಾರೆ. ತಾಯಿಯಂತೆಯೇ ಉಗ್ರರಿಗೆ ಬಲಿಯಾದ ರಾಜೀವ್ ಜಿ ಬಗ್ಗೆ ನೀಚತನದ ಮಾತನಾಡುತ್ತಿರುವ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ದೇಶದ ಮತದಾರರು ಈ ಬಾರಿ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ.


ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ ಬಂದಿದೆ. ಸೋಲಿನ ಭೀತಿಯಲ್ಲಿರುವ ಮೋದಿಯಿಂದ ಈಶ್ವರಪ್ಪನವರೆಗೆ ಎಲ್ಲರ ನಾಲಿಗೆಗಳಲ್ಲಿ ಈ ಹತಾಶೆ ಕಾಣಿಸುತ್ತಿದೆ. ಸಾರ್ವಜನಿಕ ಹಿತದೃಷ್ಠಿಯಿಂದ `ಮೈ ಚೌಕಿದಾರ್ ಅಲ್ಲ ಮೈ ಪಾಗಲ್ ಎಂದು ಬಿಜೆಪಿ ನಾಯಕರೆಲ್ಲ ಘೋಷಿಸಿಕೊಳ್ಳುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ರಫೇಲ್ ಡೀಲ್ ಬಗ್ಗೆ ಆರೋಪ ಮಾಡಿದ ರಾಹುಲ್ ಗಾಂಧಿಗೆ ರಿಲಯನ್ಸ್ ಗ್ರೂಪ್ ತಿರುಗೇಟು