Select Your Language

Notifications

webdunia
webdunia
webdunia
webdunia

ಮೊದಲ ರಾತ್ರಿ ಪತಿಗೆ ಹಾಲಿನ ಬದಲು ನಿಂಬೆಹಣ್ಣಿನ ಜ್ಯೂಸ್ ನೀಡಿದ ಪತ್ನಿ ಮಾಡಿದ್ದೇನು ಗೊತ್ತಾ?

ಹರಿಯಾಣ
ಹರಿಯಾಣ , ಮಂಗಳವಾರ, 7 ಮೇ 2019 (07:51 IST)
ಹರಿಯಾಣ : ಮದುವೆ ಆದ ಮೊದಲ ರಾತ್ರಿ ಪತಿಗೆ ಹಾಲಿನ ಬದಲು ನಿಂಬೆಹಣ್ಣಿನ ಜ್ಯೂಸ್ ನೀಡಿದ ಪತ್ನಿ ಮನೆಯಲ್ಲಿದ್ದ ಹಣ ಒಡವೆಯನ್ನು ಕೊಳ್ಳೆ ಹೊಡೆದ ಘಟನೆ ಹರಿಯಾಣದಲ್ಲಿ ನಡೆದಿದೆ.




ದೀಪಕ್ ಎಂಬಾತ ಸುನಿತಾ ಎಂಬಾಕೆಯ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದ. ಆದರೆ ಮೊದಲ ರಾತ್ರಿಯಂದು ಹಾಲಿನ ಬದಲು ನಿಂಬೆಹಣ್ಣಿನ ಜ್ಯೂಸ್ ನೀಡಿದ ಸುನಿತಾ ನನಗೆ ಮದುವೆ ಇಷ್ಟವಿರಲಿಲ್ಲ. ಅಪ್ಪ-ಅಮ್ಮನ ಒತ್ತಾಯಕ್ಕೆ ಮದುವೆಯಾಗಿದ್ದೇನೆ. ಸಂಬಂಧ ಬೆಳೆಸಲು 2 ತಿಂಗಳು ಅವಕಾಶ ನೀಡು ಎಂದಿದ್ದಾಳಂತೆ.


ಆದರೆ ಬೆಳಿಗ್ಗೆ ಎದ್ದು ನೋಡಿದಾಗ ಸುನಿತಾ ಮನೆಯಲ್ಲಿದ್ದ ಒಡವೆ, ನಗದು ಜೊತೆ ನಾಪತ್ತೆಯಾಗಿದ್ದಾಳಂತೆ. ಈ ಬಗ್ಗೆ ವರ ಸುನೀತಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸುನಿತಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಗದೀಶ್ ಶೆಟ್ಟರ್ ನನಗೆ ಬಹಳ ಆತ್ಮೀಯರು ಎಂದ ಕಾಂಗ್ರೆಸ್ ನಾಯಕ