Publish Date: Wed, 20 Mar 2019 (08:55 IST)
Updated Date: Wed, 20 Mar 2019 (08:56 IST)
ಬೆಂಗಳೂರು : ಪ್ರಶ್ನೆ : ನನ್ನದು ಆ್ಯರೆಂಜ್ ಮ್ಯಾರೇಜ್. ಆದರೆ ಮೊದಲ ರಾತ್ರಿ ಸೆಕ್ಸ್ ವೇಳೆ ನನಗೆ ರಕ್ತಸ್ರಾವವಾಗಲಿಲ್ಲ. ಇದರಿಂದ ನಾನು ಕನ್ಯೆಯಾಗಿದ್ದರೂ ಕೂಡ ನನ್ನ ಪತಿ ಮಾತ್ರ ನಾನು ಮದುವೆಗೆ ಮೊದಲು ದೈಹಿಕ ಸಂಬಂಧ ಹೊಂದಿದ್ದೇನೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಬೇರೆ ಯಾವುದೋ ಕಾರಣದಿಂದ ನನ್ನ ಕನ್ಯಪೊರೆ ಹರಿದಿದೆ. ಖಂಡಿತವಾಗಿ ನಾನು ದೈಹಿಕ ಸಂಬಂಧ ಹೊಂದಿಲ್ಲ. ಈ ಬಗ್ಗೆ ನನ್ನ ಪತಿಗೆ ನಾನು ಹೇಗೆ ಅರ್ಥ ಮಾಡಿಸಲಿ . ದಯವಿಟ್ಟು ತಿಳಿಸಿ.
ಉತ್ತರ : ಮಹಿಳೆ ಮೊದಲ ಬಾರಿ ಲೈಂಗಿಕತೆ ಹೊಂದಿದ್ದಾಗ ಆಕೆಯ ಕನ್ಯಾಪೊರೆ ಕಳಚಿ ರಕ್ತಸ್ರಾವವಾಗುತ್ತದೆ ಎಂದು ನಂಬಲಾಗಿದೆ. ಆದರೆ ಇದು ಒಂದು ಮೂಢನಂಬಿಕೆ. ನಿಮ್ಮ ಪತಿಗೂ ಕೂಡ ಲೈಂಗಿಕ ಮತ್ತು ಲೈಂಗಿಕತೆಯ ಬಗ್ಗೆ ಹಾಗೂ ಕನ್ಯಾಪೊರೆ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಕೆಲವು ಹುಡುಗಿಯರು ಕನ್ಯಾಪೊರೆ ಇಲ್ಲದೆ ಹುಟ್ಟುತ್ತಾರೆ. ಕೆಲವರಿಗೆ ಸೈಕ್ಲಿಂಗ್ ಆಡುವಾಗ ಅಥವಾ ಇನ್ನಿತರ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಅವರ ಕನ್ಯಾಪೊರೆ ಹರಿದು ಹೋಗಿರುತ್ತದೆ. ಹಾಗೇ ಹಸ್ತಮೈಥುನ ಹಾಗೂ ಟ್ಯಾಂಪೊನ್ ಗಳ ಬಳಕೆಯಿಂದಲೂ ಕನ್ಯಾಪೊರೆ ಹರಿಯುತ್ತದೆ.
ನಿಮ್ಮ ಪತಿಗೆ ಕನ್ಯಾಪೊರೆ ಹರಿಯಲು ಇರುವ ಹಲವು ಮಾರ್ಗಗಳ ಬಗ್ಗೆ ತಿಳಿಸಿ. ಹಾಗೇ ಅವರು ಒಮ್ಮೆ ಸೆಕ್ಸ್ ಕೌನ್ಸಿಲರ್ ನ್ನು ಭೇಟಿ ಮಾಡುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.