Select Your Language

Notifications

webdunia
webdunia
webdunia
webdunia

ಆಂಜನೇಯನನ್ನು ಈ ರೂಪದಲ್ಲಿ ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ

ಆಂಜನೇಯನನ್ನು ಈ ರೂಪದಲ್ಲಿ ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ
ಬೆಂಗಳೂರು , ಮಂಗಳವಾರ, 19 ಮಾರ್ಚ್ 2019 (06:40 IST)
ಬೆಂಗಳೂರು : ಆಂಜನೇಯ ಶಿವಾಂಶದಿಂದ ಜನಿಸಿದವನು. ಆತ ತುಂಬಾ ಬಲಶಾಲಿಯಾದವನು. ಮಂಗಳಕರನಾದ ಆತನನ್ನು ಭಕ್ತರು ಮಂಗಳವಾರದಂದು ಪೂಜಿಸಿ  ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ. ಆಂಜನೇಯ ಹಲವು ರೂಪವನ್ನು ಹೊಂದಿದ್ದು, ಆತನನ್ನು ವಿವಿಧ ರೂಪಗಳಲ್ಲಿ ಆರಾಧಿಸುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತದೆ.


ಪಾದಸ್ಪರ್ಷಿ ಹನುಮಾನ್ : ಇಲ್ಲಿ ಹನುಮಂತ ರಾಮನ ಪಾದ ಸ್ಪರ್ಷಿಸಿ ಆಶೀರ್ವಾದ ಪಡೆಯುತ್ತಾನೆ. ಪಾದಸ್ಪರ್ಷಿ ಹನುಮಂತನನ್ನು ಪೂಜಿಸಿದ್ರೆ ನಿಮ್ಮ ವೈಯಕ್ತಿಕ ಬದುಕು ಮತ್ತು ಉದ್ಯೋಗದಲ್ಲಿನ ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗುತ್ತವೆ.
ಸೂರ್ಯಮುಖಿ ಹನುಮಾನ್ : ಸೂರ್ಯನ ಕಿರಣಗಳು ಜ್ಞಾನ ಮತ್ತು ವಿವೇಕದ ಸಂಕೇತ. ಈ ರೂಪದಲ್ಲಿ ಹನುಮಂತ ಸೂರ್ಯನನ್ನು ಆರಾಧಿಸುತ್ತಾನೆ. ಸೂರ್ಯಮುಖಿ ಆಂಜನೇಯನನ್ನು ಪೂಜಿಸುವುದರಿಂದ ನಿಮಗೆ ಯಶಸ್ಸು ಮತ್ತು ಬುದ್ಧಿವಂತಿಕೆ ಎರಡೂ ಲಭಿಸುತ್ತದೆ.


ಮಹಾಬಲಿ ಹನುಮಾನ್ : ಈ ರೂಪದಲ್ಲಿ ಆಂಜನೇಯ ಅತ್ಯಂತ ಶಕ್ತಿಶಾಲಿಯೂ, ಭಯರಹಿತನೂ ಹಾಗೂ ಯೋಧನೂ ಆಗಿರ್ತಾನೆ. ಲಂಕೆಯ ರಾಕ್ಷಸರನ್ನೆಲ್ಲ ಸಂಹರಿಸುತ್ತಾನೆ. ಮಹಾಬಲಿ ಹನುಮಾನ್ ನನ್ನು ಆರಾಧಿಸಿದರೆ ನಿಮ್ಮಲ್ಲಿರುವ ಭಯ ತೊಲಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.


ಭಕ್ತ ಹನುಮಾನ್ : ಈ ರೂಪದಲ್ಲಿ ಹನುಮಂತ ರಾಮನನ್ನು ಪೂಜಿಸುತ್ತಾನೆ. ಭಕ್ತ ಹನುಮಾನ್ ನನ್ನು ಆರಾಧಿಸುವುದರಿಂದ ನೀವು ಅತಿ ಶೀಘ್ರವಾಗಿ ಬದುಕಿನ ಗುರಿ ತಲುಪಬಹುದು.


ಉತ್ತರಮುಖಿ ಹನುಮಾನ್ : ದೇವರುಗಳೆಲ್ಲ ಉತ್ತರ ದಿಕ್ಕಿನಲ್ಲಿರುತ್ತಾರೆ ಎಂಬ ನಂಬಿಕೆ ಇದೆ. ಹನುಮಂತ, ಉತ್ತರಕ್ಕೆ ಮುಖಮಾಡಿರುವ ಮೂರ್ತಿಯನ್ನು ಇಟ್ಟು ಪೂಜಿಸುವುದರಿಂದ ಎಲ್ಲಾ ದೇವರ ಕೃಪೆಯೂ ನಿಮಗೆ ದೊರೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಅನುರಾಧ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?