Publish Date: Wed, 20 Mar 2019 (08:37 IST)
Updated Date: Wed, 20 Mar 2019 (08:39 IST)
ಬೆಂಗಳೂರು : ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸುವುದು ನಮ್ಮ ಗುರಿ. ಎರಡು ಅಂಕಿ ದಾಟಲು ಬಿಜೆಪಿಯನ್ನು ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ನೀಡಿರುವ ಹೇಳಿಕೆಗೆ ಬಿಜೆಪಿ ಮುಖಂಡ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನರೇಂದ್ರ ಮೋದಿ ಗೆದ್ದರೆ ದೇಶ ಬಿಡುತ್ತೇನೆಂದು ಹೇಳಿದ್ದರು ದೇವೇಗೌಡರು ಮೊದಲು ತಮ್ಮ ಮಾತಿನಂತೆ ನಡೆದುಕೊಳ್ಳಲಿ’ ಎಂದು ವ್ಯಂಗ್ಯವಾಡಿದ್ದಾರೆ.
‘ದೇವೇಗೌಡರು ಮಕ್ಕಳು ಮೊಮ್ಮಕ್ಕಳಿಗೆ ಟಿಕೆಟ್ ಕೊಟ್ಟು ಕಾರ್ಯಕರ್ತರನ್ನು ದೂರ ಇಟ್ಟಿದ್ದರಿ, ನಿಮಗೆ ಜನ ಯಾಕೆ ಮತ ಹಾಕಬೇಕು ? ಎಂಬುದನ್ನು ಜನರು ಹೇಳಲಿ, ಸಿದ್ದರಾಮಯ್ಯ ನೀಚ ಎಂದು ಹೇಳಿದ್ದ ನೀವೇ ಈಗ ಅವರ ಜೊತೆ ಕೈಜೋಡಿಸಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.