Select Your Language

Notifications

webdunia
webdunia
webdunia
webdunia

ಮಹಿಳೆಯರಿಗೆ ಕಾಮುಕರಿಂದ ರಕ್ಷಿಸಿಕೊಳ್ಳಲು ನೆರವಾಗುತ್ತೇ ಈ ಇಂಟ್ರೆಸ್ಟಿಂಗ್​ ಡಿವೈಸ್

ಮಹಿಳೆಯರಿಗೆ ಕಾಮುಕರಿಂದ ರಕ್ಷಿಸಿಕೊಳ್ಳಲು ನೆರವಾಗುತ್ತೇ  ಈ ಇಂಟ್ರೆಸ್ಟಿಂಗ್​ ಡಿವೈಸ್
ಬೆಂಗಳೂರು , ಮಂಗಳವಾರ, 19 ಮಾರ್ಚ್ 2019 (10:26 IST)
ಬೆಂಗಳೂರು : ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಮಹಿಳೆಯರು ಈ ಪ್ರಕರಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು  ಮಹಿಳೆಯೊಬ್ಬರು ಒಂದು ಇಂಟ್ರೆಸ್ಟಿಂಗ್​ ಡಿವೈಸ್​ ಕಂಡುಹಿಡಿದಿದ್ದಾರೆ. 


ಎಂಐಟಿಯ ಭಾರತೀಯ ವಿಜ್ಞಾನಿ ಮನೀಶಾ ಮೋಹನ್ ಈ ಇಂಟ್ರೆಸ್ಟಿಂಗ್​ ಡಿವೈಸ್​ ಕಂಡುಹಿಡಿದಿದ್ದು, ಇದನ್ನು  ಮಹಿಳೆರು ಸೇಫ್ಟೀ ಅಲ್ಲದ ಸ್ಥಳಗಳಿಗೆ ಹೋಗುವಾಗ ಧರಿಸಿದರೆ ಕಾಮುಕರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯಕವಾಗುವುದು ಎಂಬುದಾಗಿ ತಿಳಿಸಿದ್ದಾರೆ. ಅಂದಹಾಗೆ ಈ ಡಿವೈಸ್​ ಹೇಗೆ ವರ್ಕ್​ ಆಗುತ್ತೆ? ಇದನ್ನ ಬಳಸೋದಾದ್ರೂ ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.


ಈ ಇಂಟ್ರೆಪಿಡ್​ ಡಿವೈಸ್​ನ್ನು ಮಹಿಳೆಯರು ತಮ್ಮ ಒಳಉಡುಪುಗಳಲ್ಲಿ ಜಸ್ಟ್​ ಅಟ್ಯಾಚ್​ ಮಾಡಿ ಅವರಿಗೆ ಸೇಫ್ಟೀ ಅಲ್ಲದ ಸ್ಥಳಗಳಿಗೆ ಹೋಗುವಾಗ ಧರಿಸಬೇಕು. ಹಾಗೇನೆ ಆ ಡಿವೈಸ್ ​ನ್ನು ನಿಮ್ಮ ಹತ್ತಿರದ ಆತ್ಮೀಯ ಅಥವಾ ತೀರಾ ಹೆಲ್ಸ್​ ಮಾಡುವ ಸ್ನೇಹಿತರು, ಹೆತ್ತವರ ಮೊಬೈಲ್ ​ಗೆ ಆಪ್ಲಿಕೇಶನ್​ ನೊಂದಿಗೆ ಕನೆಕ್ಟ್​ ಮಾಡಿಕೊಳ್ಳಬಹುದು. ಹೀಗೆ ಮಾಡೋದರಿಂದ ಯಾರಾದ್ರೂ ಫೋರ್ಸ್​ ಫುಲ್​ ಆಗಿ ನಿಮ್ಮ ಬಟ್ಟೆಗಳನ್ನ ಎಳೆದಾಡಿದಾಗ ಈ ಆಪ್ಲಿಕೇಶನ್​ ಸಂಯೋಜಿತವಾಗಿರುವ ಬ್ಲೂಟೂತ್​ ಸಾಧನ ನೀವು ಕನೆಕ್ಟ್​ ಮಾಡಿದಂಥಹ ಅಷ್ಟು ಮೊಬೈಲ್​ ನಂಬರ್ ​ಗಳಿಗೆ ಐ ಆಮ ಅಟ್​ ರಿಸ್ಕ್, ​ ಪ್ಲೀಸ್​ ಸೇವ್​ ಮೀ ಅಂತ ಎಚ್ಚರಿಕೆಯ ಮೆಸೇಜ್​ಗಳನ್ನು ಮತ್ತು ನೀವಿರುವ ಸ್ಥಳದ ಮಾಹಿತಿಯನ್ನು ​ ಅಟೋಮ್ಯಾಟಿಕ್​ ಆಗಿ ತೋರಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ನನಗಿಂತ ಹೆಚ್ಚು ವಯಸ್ಸಿನ ಮಹಿಳೆಯ ಜೊತೆ ಸಂಬಂಧ ಬೆಳೆಸಲು ಇಷ್ಟಪಡುತ್ತೇನೆ. ಈ ನಿರ್ಧಾರ ಸರಿಯೇ?