Select Your Language

Notifications

webdunia
webdunia
webdunia
webdunia

ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡಿದರೆ ಸೋಲು ಗ್ಯಾರಂಟಿ ಎಂದು ಶಾಸಕ ಸುರೇಶ್ ಗೌಡ ಹೇಳುವುದರ ಹಿಂದಿರುವ ಕಾರಣವೇನು ಗೊತ್ತಾ?

ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡಿದರೆ ಸೋಲು ಗ್ಯಾರಂಟಿ ಎಂದು ಶಾಸಕ ಸುರೇಶ್ ಗೌಡ ಹೇಳುವುದರ ಹಿಂದಿರುವ ಕಾರಣವೇನು ಗೊತ್ತಾ?
ತುಮಕೂರು , ಮಂಗಳವಾರ, 19 ಮಾರ್ಚ್ 2019 (10:24 IST)
ತುಮಕೂರು : ಮಾಜಿ ಪ್ರಧಾನಿ ದೇವೇಗೌಡರಿಗೆ ಗಂಗೆ ಶಾಪವಿರುವುದರಿಂದ ಅವರು ತುಮಕೂರಿನಿಂದ ಸ್ಪರ್ಧೆ ಮಾಡಿದರೆ ಅವರ ಸೋಲು ಗ್ಯಾರಂಟಿ ಎಂದು ತುಮಕೂರು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಮಾಜಿ ಶಾಸಕ ಸುರೇಶ್ ಗೌಡ ಭವಿಷ್ಯ ನುಡಿದಿದ್ದಾರೆ.


ತುಮಕೂರಿನಲ್ಲಿ ಮಾತನಾಡಿದ ಸುರೇಶ್ ಗೌಡರು, ದೇವೇಗೌಡರಿಗೆ ಗಂಗೆ ಶಾಪ ಇರೋದಾಗಿ ಈಗಾಗಲೇ ಜ್ಯೋತಿಷಿಗಳು ಹೇಳಿದ್ದಾರೆ. ಈ ವಿಚಾರ ಸ್ವತಃ ದೇವೇಗೌಡರಿಗೆ ಗೊತ್ತು. ಈ ಶಾಪ ಹೊತ್ತುಕೊಂಡು ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡಿದರೆ ಅವರ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.


ತುಮಕೂರು ಜಿಲ್ಲೆಗೆ ಹೇಮಾವತಿ ನೀರು ನೀಡದೆ ದೇವೇಗೌಡರು ವಂಚಿಸಿದ್ದಾರೆ. ಲಕ್ಷಾಂತರ ರೈತರ ಕಣ್ಣೀರ ಶಾಪದಿಂದಾಗಿ ಮಾತೆ ಗಂಗೆ ದೇವೇಗೌಡರ ಮೇಲೆ ಶಾಪ ಕೊಟ್ಟಿದ್ದಾಳೆ. ಹಾಗಾಗಿ ತೂಮಕೂರಿನಿಂದ ಸ್ಪರ್ಧೆ ಮಾಡಿದರೆ ಶಾಪದಿಂದಾಗಿ ಅವರ ಸೋಲು ಗ್ಯಾರಂಟಿ ಎಂದು ಸುರೇಶ್ ಗೌಡ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭಾ ಚುನಾವಣೆಯ ಹಿನ್ನೆಲೆ; ರಾಜ್ಯದ ಮೊದಲ ಹಂತದ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ