ಜನರ ನಿದ್ದೆಗೆಡಿಸಿದ್ದ ಕುಖ್ಯಾತ ಸರಗಳ್ಳರಿಗೆ ಗುಂಡೇಟು

ಮಂಗಳವಾರ, 21 ಮೇ 2019 (13:35 IST)
ಜನರ ನಿದ್ದೆಗೆಡಿಸಿದ್ದ ಕುಖ್ಯಾತ ಸರಗಳ್ಳರ ಮೇಲೆ ಫೈರಿಂಗ್ ಮಾಡುವ ಮೂಲಕ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಸರಗಳವು, ಸುಲಿಗೆ ಕೃತ್ಯಗಳು ದಾಖಲಾಗಿದ್ದವು. ದೆಹಲಿ ಮೂಲದ ಕುಖ್ಯಾತ ಕಳ್ಳರಾದ ಸುರೇಂದ್ರ ಸಿಂಗ್ ಹಾಗೂ ಕರಣ್ ಗುಪ್ತಾಗೆ ಗುಂಡು ಹೊಡೆದು ಪೊಲೀಸರು ಬಂಧನ ಮಾಡಿದ್ದಾರೆ.

ಆರೋಪಿಗಳು ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆರೋಪಿಗಳನ್ನು ಬಂಧನ ಮಾಡುವ ಸಂದರ್ಭದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

ಕುಖ್ಯಾತ ಆರೋಪಿಗಳು ಬೆಂಗಳೂರು, ಹೈದ್ರಾಬಾದ್, ದೆಹಲಿ, ಚೆನ್ನೈ ಮೊದಲಾದೆಡೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೋಚಿಂಗ್ ಕೊಡು ಅಂದರೆ ಅಲಲ್ಲಿ ಟಚ್ ಮಾಡ್ತಾನೆ