Publish Date: Sat, 27 Jul 2019 (10:46 IST)
Updated Date: Sat, 27 Jul 2019 (10:48 IST)
ಬೆಂಗಳೂರು : ಸೋಮವಾರ ನೂರಕ್ಕೆ ನೂರರಷ್ಟು ಬಹುಮತವನ್ನು ಸಾಬೀತು ಪಡಿಸುತ್ತೇವೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ನೂರಕ್ಕೆ ನೂರರಷ್ಟು ಬಹುಮತವನ್ನು ಸಾಬೀತು ಪಡಿಸುತ್ತೇವೆ. ಸಿಎಂ ಬಿಎಸ್ ಯಡಿಯೂರಪ್ಪ ಒಬ್ಬ ಹೋರಾಟಗಾರ. ಸ್ವಪ್ರಯತ್ನದಿಂದ ರೈತನಾಯಕನಾಗಿ ಹೊರಹೊಮ್ಮಿದವರು. ಬಂದ ತಕ್ಷಣ ರೈತರ ಪರವಾದ ನಿರ್ಣಯ ಕೈಗೊಂಡಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ನೇಕಾರರಿಗೆ ಆದ್ಯತೆ ನೀಡ್ತಾರೆ ಎಂದು ಅವರು ತಿಳಿಸಿದ್ದಾರೆ.
ಹಾಗೇ ಈ ಬಗ್ಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಬಿಜೆಪಿ ಪಕ್ಷ ಸೋಮವಾರ ಸುಲಭವಾಗಿ ಬಹುಮತ ಸಾಬೀತುಪಡಿಸಲಿದೆ, ಸ್ವತಂತ್ರ್ಯ ಸರ್ಕಾರ ಬಿಜೆಪಿಯ ಆದ್ಯತೆ ಹೀಗಾಗಿ 'ನಮಗೆ ಜೆಡಿಎಸ್ ಬಾಹ್ಯ ಬೆಂಬಲ ಬೇಕಿಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ' ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.