Select Your Language

Notifications

webdunia
webdunia
webdunia
webdunia

ಅತಿಯಾಗಿ ಟೊಮೆಟೊ ಸೇವಿಸಿದರೆ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಚ್ಚರ

ಅತಿಯಾಗಿ ಟೊಮೆಟೊ ಸೇವಿಸಿದರೆ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಚ್ಚರ
ಬೆಂಗಳೂರು , ಶನಿವಾರ, 27 ಜುಲೈ 2019 (06:48 IST)
ಬೆಂಗಳೂರು : ಟೊಮೆಟೊ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅತಿಯಾದರೆ ಅಮೃತವು ವಿಷವಾಗುತ್ತದೆ ಎಂಬಂತೆ ಅತಿಯಾಗಿ ಟೊಮೆಟೊ ಸೇವಿಸಿದರೆ ಹಲವಾರು ರೀತಿಯ ಅಡ್ಡ ಪರಿಣಾಮಗಳು ಆಗಬಹುದು.




*ಅತಿಯಾಗಿ ಟೊಮೆಟೊ ಸೇವಿಸಿದರೆ ಟೊಮೆಟೋದಲ್ಲಿರುವ ಸಲ್ಮೊನೆಲ್ಲಾ ಅಂಶದಿಂದ ಹೊಟ್ಟೆ ಉಬ್ಬರ, ಭೇದಿ ಉಂಟಾಗಬಹುದು.


* ಟೊಮೆಟೋದಲ್ಲಿ ಇರುವ ಮೆಲಿಕ್ ಮತ್ತು ಸಿಟ್ರಿಕ್ ಆಮ್ಲವು ಅತಿಯಾಗಿ ಆಮ್ಲ ಉತ್ಪತ್ತಿ ಮಾಡುವುದು. ಇದರಿಂದ ಆಮ್ಲವು ಹಿಮ್ಮುಖವಾಗಿ ಹರಿಯುವುದು. ಜಠರ ಹಿಮ್ಮುಖ ಹರಿವು ರೋಗ(ಜಿಇಆರ್‌ ಡಿ)ದ ಸಮಸ್ಯೆಯಿರುವವರಿಗೆ ಇದು ಮತ್ತಷ್ಟು ಕೆಟ್ಟ ಪರಿಣಾಮ ಬೀರುವುದು.


* ಟೊಮೆಟೋದಲ್ಲಿ ಆಕ್ಸಲೇಟ್ ಗರಿಷ್ಠ ಮಟ್ಟದಲ್ಲಿದ್ದು, ಇದು ಕಿಡ್ನಿ ಕಲ್ಲುಗಳಿಗೆ ಕಾರಣವಾಗಬಹುದು.

* ಟೊಮೆಟೋ ಸೂಪ್ ಅಥವಾ ಟೊಮೆಟೋ ಕೆಚಪ್ ಇತ್ಯಾದಿ ಸೇವನೆ ಮಾಡಿದಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇರುವುದು. ಇದು ರಕ್ತದೊತ್ತಡ ಮೇಲೆ ಪರಿಣಾಮ ಬೀರುತ್ತದೆ.

* ಅಧ್ಯಯನ ಪ್ರಕಾರ ಟೊಮೆಟೋದಲ್ಲಿರುವ ಲೈಕೊಪೆನೆ ಅಂಶವು ಜನನೇಂದ್ರಿಯ ಗ್ರಂಥಿ ಕ್ಯಾನ್ಸರ್ ಸಾಧ್ಯತೆ ಹೆಚ್ಚಿಸುವುದು.

* ಆಮ್ಲೀಯ ಗುಣ  ಹೊಂದಿರುವಂತಹ ಟೊಮೆಟೋ ಮೂತ್ರನಾಳದ ಕಿರಿಕಿರಿಗೆ ಕಾರಣವಾಗುವುದು

* ಅತಿಯಾಗಿ ಟೊಮೆಟೋ ಸೇವನೆ ಮಾಡಿದರೆ ಅದರಿಂದ ಸಂಧಿವಾತ ಉಂಟಾಗಬಹುದು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಬಹುದು.

* ಮೈಗ್ರೇನ್ ತಜ್ಞರ ಪ್ರಕಾರ ಟೊಮೆಟೋದಿಂದ ಮೈಗ್ರೇನ್ ಉಂಟಾಗಬಹುದು

* ಟೊಮೆಟೋದಲ್ಲಿ ಗ್ಲೈಸೆಮಿಕ್ ಅಂಶವು ಕಡಿಮೆ ಇರುವ ಕಾರಣದಿಂದಾಗಿ ಅದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಆದರೆ ಅತಿಯಾದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಮತ್ತಷ್ಟು ಕುಸಿಯಬಹುದು. ಇದರಿಂದ ದೃಷ್ಟಿ ಮಂದ, ಎದೆಯುರಿ, ಆಯಾಸ, ಬೆವರುವಿಕೆ ಇತ್ಯಾದಿ ಉಂಟಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ಪೂರದಿಂದ ಕೂದಲು ಬಿಳಿಯಾಗುವ ಸಮಸ್ಯೆ ಪರಿಹರಿಸಿಕೊಳ್ಳುವುದು ಹೇಗೆ ಗೊತ್ತಾ?